ರಾಣೇಬೆನ್ನೂರು(ಹಾವೇರಿ) :ಜನರಿಗೆ ನಿಜ ಬದುಕಿನ ಪರಮ ಸತ್ಯವನ್ನು ತೋರಿಸಿದ ಮಹಾಸಂತರಲ್ಲಿ ಮಹಾಯೋಗಿ ಶ್ರೀ ವೇಮನರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ರಾಣೇಬೆನ್ನೂರಲ್ಲಿ ಶ್ರೀ ವೇಮನ 608ನೇ ಜಯಂತಿ: ಶಾಸಕ ಅರುಣಕುಮಾರ ಪೂಜಾರ ಚಾಲನೆ - Sri Vemana Jayanti Celebration
ರಾಣೇಬೆನ್ನೂರಿನ ವೇಮನ ಆವರಣದಲ್ಲಿ ಮಹಾಯೋಗಿ ಶ್ರೀ ವೇಮನರ 608ನೇ ಜಯಂತಿ ಆಚರಿಸಲಾಯಿತು. ಶಾಸಕ ಅರುಣಕುಮಾರ ಪೂಜಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇಮನ 608ನೇ ಜಯಂತಿ ಆಚರಣೆ: ಅರುಣಕುಮಾರ ಪೂಜಾರ ಚಾಲನೆ
ನಗರದ ವೇಮನ ಆವರಣದಲ್ಲಿ ನಡೆದ ಮಹಾಯೋಗಿ ಶ್ರೀ ವೇಮನರ 608ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಎಂದಿಗೂ ಆ ಜಾತಿ, ಈ ಜಾತಿ ಎಂದು ಗುರುತಿಸಲಿಲ್ಲ. ಈಗ ನಾವು ಜಾತಿ-ಜಾತಿ ಎಂದು ಹೊಡೆದಾಡುತ್ತಿದ್ದೇವೆ. ಮಹಾಯೋಗಿ ವೇಮನರು ತತ್ವಾದರ್ಶನಗಳನ್ನು ಹೊಂದಿರುವ ಮಹಾನ್ ವ್ಯಕ್ತಿ. ಅಂತವರು ಬಿಟ್ಟು ಹೋಗಿರುವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸನಗೌಡ ಕೊಟೂರು, ಆರ್.ಎಫ್. ರಾಯರೆಡ್ಡಿ, ಚೋಳಪ್ಪ ಕಸವಾಳ, ಪ್ರಶಾಂತ ರೆಡ್ಡಿ, ನಿಂಗರೆಡ್ಡಿ ಕೆಂಚರೆಡ್ಡಿ ಮುಂತಾದವರು ಹಾಜರಿದ್ದರು.