ಹಾವೇರಿ: ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ಮೊದ ಮೊದಲು 40 ಡಿಗ್ರಿ ಸೆಲ್ಸಿಯಸ್ ಒಳಗೆ ಇರುತ್ತಿದ್ದ ತಾಪಮಾನ ಇದೀಗ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ.
ಹಾವೇರಿಯಲ್ಲಿ ಮತ್ತೆ ಏರಿಕೆಯಾದ ತಾಪಮಾನ!
ಒಂದೆಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಲೋಕಸಭಾ ಚುನಾವಣಾ ಅಖಾಡ ಕೂಡ ಕಾವೇರತೊಡಗಿದೆ. ಜಿಲ್ಲೆಯ ಕೆಲ ಜನರು ಬಿಸಿಲಿಗೆ ಬಸವಳಿದಿದ್ದರೆ ಇನ್ನು ಕೆಲವರು ಚುನಾವಣೆ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿದ್ದಾರೆ.
ಸೆಕೆಯಿಂದ ರಕ್ಷಿಸಿಕೊಳ್ಳಲು ಕೂಲರ್ಗಳ ಮೊರೆಹೋದ ನಗರ ನಿವಾಸಿಗರು.
ಹಾಗಾಗಿ ಜನರು ಬಿಸಿಲಿನ ತಾಪಕ್ಕೆ ಬಸವಳಿದಿದ್ದು ಕೃತಕ ಉಪಕರಣಗಳತ್ತ ಮುಖ ಮಾಡಿದ್ದಾರೆ. ಫ್ಯಾನ್, ಫ್ರಿಡ್ಜ್, ಕೂಲರ್, ಎಸಿ ಸೇರಿದಂತೆ ಇತರೆ ವಸ್ತುಗಳ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ. ಬೇಸಿಗೆಗಾಗಿಯೇ ವರ್ತಕರು ನಾನಾ ಬಗೆಯ ವಿದ್ಯುತ್ ಉಪಕರಣಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಇವುಗಳ ಖರೀದಿಯಲ್ಲಿ ಮುಳುಗಿದ್ದಾರೆ. ಮಾರುಕಟ್ಟೆಗೆ ವೈವಿಧ್ಯಮಯ ಉಪಕರಣಗಳು ಬಂದಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಮತ್ತೊಂದೆಡೆ ಲೋಕಸಭಾ ಚುನಾವಣಾ ಕಾವು ಕೂಡ ಏರತೊಡಗಿದೆ.