ಹಾನಗಲ್ : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿರೋ ಕೋಡಿಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ ನಡೆದಿದೆ.
ಹಾನಗಲ್: ಬೀಗ ಒಡೆದು ದೇವಸ್ಥಾನದ ಹುಂಡಿ ಕಳ್ಳತನ - hangal latest crime news
ದೇವಸ್ಥಾನದಲ್ಲಿದ್ದ ಬೆಳ್ಳಿ ಆಭರಣಗಳು, ಕಾಣಿಕೆ ಹುಂಡಿ ಮತ್ತು ಮೈಕ್ ಕಳ್ಳತನ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ವ್ಯಾಪ್ತಿಯ ಕೋಡಿಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಹಾನಗಲ್
ದೇವಸ್ಥಾನದಲ್ಲಿದ್ದ ಬೆಳ್ಳಿ ಆಭರಣಗಳು, ಕಾಣಿಕೆ ಹುಂಡಿ ಮತ್ತು ಮೈಕ್ ಕಳ್ಳತನವಾಗಿದ್ದು, ಹುಂಡಿಯಲ್ಲಿದ್ದ ಐದು ಸಾವಿರಕ್ಕೂ ಅಧಿಕ ಹಣ ದೋಚಿ, ಹುಂಡಿಯನ್ನು ಖದೀಮರು ಕೆರೆಯಲ್ಲಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.