ಹಾನಗಲ್ :ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೇವಾಲಾಲ್ (ಬಾಳೂರ) ಗ್ರಾಮದ ಅಣ್ಣಪ್ಪ ರಾಮಪ್ಪ ಲಮಾಣಿ ಎಂಬ ವ್ಯಕ್ತಿ ತನ್ನ ತಾಯಿಯ ನೆನಪಿಗೋಸ್ಕರ ತನ್ನ ಸ್ವಂತ ಜಾಗದಲ್ಲಿ ದೇವಾಲಯ ಕಟ್ಟಿದ್ದಾರೆ. ಗುಡಿಯ ಒಳ ಭಾಗದಲ್ಲಿ ತಾಯಿಯ ಮೂರ್ತಿ ನಿರ್ಮಿಸಿ ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ತಾಯಿಗಿಂತ ಮಿಗಿಲಾದ ದೇವರುಂಟೆ.. ಹೆತ್ತವಳಿಗಾಗಿ ಗುಡಿ ಕಟ್ಟಿಸಿದ ಮಗ!! - mother's day
ತಾಯಿಯ ಅಗಲಿಕೆಯ ದುಃಖವನ್ನ ಮರೆಯಲಾಗದ ಅಣ್ಣಪ್ಪ ಲಮಾಣಿ ತನ್ನ ತಾಯಿಯ ನೆನಪಿಗೋಸ್ಕರ ತಾಯಿ ಮೂರ್ತಿಯನ್ನಿಟ್ಟು ಸುಮಾರು ₹4 ಲಕ್ಷ ವೆಚ್ಚದಲ್ಲಿ ದೇವಾಲಯ ಕಟ್ಟಿಸಿ ಪ್ರತಿ ನಿತ್ಯ ಪೂಜೆ ಮಾಡುತ್ತಾ ಬಂದಿದ್ದಾರೆ.
ಹೆತ್ತವಳಿಗಾಗಿ ಗುಡಿ ಕಟ್ಟಿಸಿದ ಮಗ
2010ರಲ್ಲಿ ಅಣ್ಣಪ್ಪ ರಾಮಪ್ಪ ಲಮಾಣಿ ಅವರ ತಾಯಿ ಹೇಮಲವ್ವ ರಾಮಪ್ಪ ಲಮಾಣಿ ವಿಧಿವಶರಾದ್ರು. ತಾಯಿಯ ಅಗಲಿಕೆಯ ದುಃಖವನ್ನ ಮರೆಯಲಾಗದ ಅಣ್ಣಪ್ಪ ಲಮಾಣಿ ತನ್ನ ತಾಯಿಯ ನೆನಪಿಗೋಸ್ಕರ ತಾಯಿ ಮೂರ್ತಿಯನ್ನಿಟ್ಟು ಸುಮಾರು ₹4 ಲಕ್ಷ ವೆಚ್ಚದಲ್ಲಿ ದೇವಾಲಯ ಕಟ್ಟಿಸಿ ಪ್ರತಿ ನಿತ್ಯ ಪೂಜೆ ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ನವರಾತ್ರಿಯಂದು ತಾಯಿಯ ಹೆಸರಿನಲ್ಲಿ ಅನ್ನದಾಸೋಹ ಕೂಡ ನೆರವೇರಿಸುತ್ತಾರೆ.
Last Updated : May 10, 2020, 5:12 PM IST