ರಾಣೆಬೆನ್ನೂರು(ಹಾವೇರಿ): ಶಾಲಾ ಆರಂಭಕ್ಕೂ ಮುನ್ನ ರಾಣೆಬೆನ್ನೂರಲ್ಲಿ ಶಿಕ್ಷಕರಲ್ಲಿ ಕೊರೊನಾ ಸೋಂಕು ದೃಢಪಡುತ್ತಿದ್ದು, ಇಂದು ಮೊತ್ತರ್ವ ಶಿಕ್ಷಕನಿಗೆ ಕೊರೊನಾ ಸೊಂಕು ದೃಢವಾಗಿದೆ.
ರಾಣೆಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಿಗೆ ಕೊರೊನಾ ದೃಢವಾಗಿದೆ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.
ನಿನ್ನೆ ಶಾಲಾ ಆರಂಭಕ್ಕೂ ಮುನ್ನ ಎಲ್ಲಾ ಶಿಕ್ಷಕರಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಈ ಸಮಯದಲ್ಲಿ ಶಿಕ್ಷಕನಿಗೆ ಇಂದು ಕೊರೊನಾ ದೃಢವಾಗಿದೆ. ಆದ್ದರಿಂದ ನಿನ್ನೆ ಶಾಲೆಗೆ ಬಂದಂತಹ 32 ಮಕ್ಕಳಿಗೂ ಕೊರೊನಾ ತಪಾಸಣೆ ಮಾಡುವಂತೆ ಆದೇಶ ಮಾಡಲಾಗಿದೆ.