ಕರ್ನಾಟಕ

karnataka

ETV Bharat / state

ಕೊರೊನಾ ವರದಿ ಬರುವ ಮುನ್ನವೇ ಶಾಲೆಗೆ ಬಂದ ಶಿಕ್ಷಕಿ

ಕೊರೊನಾ ಪರೀಕ್ಷೆ ಮಾಡಿಸಿಕೊಂಡು ವರದಿ ಬರುವುದಕ್ಕೂ ಮುನ್ನವೇ ಶಾಲೆಗೆ ಬಂದಿದ್ದ ಶಿಕ್ಷಕರ ವಿರುದ್ಧ ಚಿಕ್ಕಕುರುವತ್ತಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Teacher of the school before the Corona report
ಶಿಕ್ಷಣಾಧಿಕಾರಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

By

Published : Jan 4, 2021, 9:25 PM IST

ಹಾವೇರಿ: ಕೊರೊನಾ ವರದಿ ಬರುವುದಕ್ಕೂ ಮುನ್ನವೇ ಶಾಲೆಗೆ ಶಿಕ್ಷಕಿ ಬಂದಿದ್ದಕ್ಕೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ...ಆ್ಯಪ್​ ಮೂಲಕ ಏರ್ ಟಿಕೆಟ್ ಬುಕ್​​ ಮಾಡಿದವನಿಗೆ 7 ಲಕ್ಷ ದೋಖಾ!

ಶಾಲೆಗೆ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್‌ ಅವರನ್ನು ಗ್ರಾಮಸ್ಥರು ತೀವ್ರ ತರಾಟೆ ತಗೆದುಕೊಂಡರು. ಕೋವಿಡ್​ ವರದಿ ಇನ್ನೂ ಬಂದಿಲ್ಲ. ಆದರೂ ಶಿಕ್ಷಕಿ ಶಾಲೆಗೆ ಬರುವ ಮೂಲಕ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಿಕ್ಷಣಾಧಿಕಾರಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

ಶಿಕ್ಷಕರ ಕೊರೊನಾ ಪರೀಕ್ಷೆ ನಡೆಸಬೇಕು. ವರದಿ ಬಂದ ನಂತರವೇ ಪಾಠ ಮಾಡಲು ಶಿಕ್ಷಕರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಶಾಲೆಗೆ ಆಗಮಿಸಿದ್ದ ಆರೋಗ್ಯ ಸಿಬ್ಬಂದಿ, 23 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿಕೊಟ್ಟರು.

ABOUT THE AUTHOR

...view details