ಹಾವೇರಿ(ರಾಣೆಬೆನ್ನೂರು): ಚಲಿಸುತ್ತಿರುವ ಬೈಕ್ನಿಂದ ಬಿದ್ದು ಶಿಕ್ಷಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಗಾಜಲ ತಾಂಡಾ ಬಳಿ ಸಂಭವಿಸಿದೆ.
ಹಾವೇರಿ: ಬೈಕ್ ಸ್ಕಿಡ್ ಆಗಿ ಶಾಲೆಗೆ ಹೋಗುತ್ತಿದ್ದ ಶಿಕ್ಷಕಿ ಸಾವು - ರಾಣೆಬೆನ್ನೂರು ಗ್ರಾಮಾಂತರ ಠಾಣೆ
ಮೇಡ್ಲೇರಿ ಗ್ರಾಮದ ಬಿರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಶಾಲೆಗೆ ತಮ್ಮ ಪತಿಯ ಜತೆ ತೆರಳುವಾಗ ಬೈಕ್ ಸ್ಕಿಡ್ ಆಗಿದೆ.
ಶಾಲೆಗೆ ಹೋಗುತ್ತಿದ್ದ ಶಿಕ್ಷಕಿ ಬೈಕ್ನಿಂದ ಬಿದ್ದು ಸಾವು
ರಾಣೆಬೆನ್ನೂರಿನ ಲೀಲಾವತಿ ಬಸವರಾಜ ಕಟಿಗೇರ(33)ಮೃತ ಶಿಕ್ಷಕಿ. ಇವರು ಮೇಡ್ಲೇರಿ ಗ್ರಾಮದ ಬಿರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಶಾಲೆಗೆ ತಮ್ಮ ಪತಿಯ ಜತೆ ತೆರಳುವಾಗ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಲೀಲಾವತಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.