ರಾಣೆಬೆನ್ನೂರು :ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ನಡೆಸುತ್ತಿದ್ದ ತಾಲೂಕಿನ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರೊಬ್ಬರು ಭಾಗವಹಿಸಿ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.
ಪ್ರಗತಿ ಪರಿಶೀಲನಾ ಸಭೆ.. ತಾಪಂ ಸದಸ್ಯರೊಬ್ಬರ ಪ್ರಶ್ನೆಗೆ ಅಧಿಕಾರಿಗಳಿಗೆ ಮುಜುಗರ.. - ranebennuru taluk progress review meeting
ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರೊಬ್ಬರು ಭಾಗವಹಿಸಿ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಂತೆಯೇ ಅಧಿಕಾರಿಗಳು ಇರಿಸುಮುರಿಸು ಅನುಭವಿಸುವಂತಾಯ್ತು. ಅಧಿಕಾರಿಗಳು ಶಾಸಕರಿಗೆ ಉತ್ತರ ನೀಡಬೇಕಾ ಅಥವಾ ಸದಸ್ಯರಿಗೆ ಉತ್ತರಿಸಬೇಕಾ ಎಂಬುದು ತಿಳಿಯದೇ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ನಡೆದಿದೆ.
![ಪ್ರಗತಿ ಪರಿಶೀಲನಾ ಸಭೆ.. ತಾಪಂ ಸದಸ್ಯರೊಬ್ಬರ ಪ್ರಶ್ನೆಗೆ ಅಧಿಕಾರಿಗಳಿಗೆ ಮುಜುಗರ.. Taluk progress review meeting at Ranebennuru](https://etvbharatimages.akamaized.net/etvbharat/prod-images/768-512-5404498-thumbnail-3x2-haveri.jpg)
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದ ವೇಳೆ,ಬಿಜೆಪಿ ತಾಪಂ ಸದಸ್ಯರೊಬ್ಬರು ಮಧ್ಯೆ ಎದ್ದು ನಿಂತರು. ಅಧಿಕಾರಿಗಳು ಶಾಸಕರಿಗೆ ವರದಿ ಒಪ್ಪಿಸುತ್ತಿದ್ದಾಗ ಅಧಿಕಾರಿಗಳಿಗೆ ಪ್ರಶ್ನೆ ಹಾಕಿದ್ದಾರೆ. ಇದರಿಂದ ಮುಜುಗರಗೊಂಡ ಅಧಿಕಾರಿಗಳು ಶಾಸಕರಿಗೆ ಉತ್ತರ ನೀಡಬೇಕಾ ಅಥವಾ ತಾಲೂಕು ಪಂಚಾಯತ್ ಸದಸ್ಯನಿಗೆ ಉತ್ತರ ಕೊಡಬೇಕೆ ಎಂಬದು ತಿಳಿಯದೇ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗ ನಡೆಯಿತು.
ಪ್ರತಿ ಇಲಾಖಾವಾರು ಅಭಿವೃದ್ಧಿ ಮತ್ತು ಕೆಲಸದ ಬಗ್ಗೆ ಶಾಸಕರಿಗೆ ಮಾಹಿತಿ ನೀಡುತ್ತಿದ್ದ ಸಮಯದಲ್ಲಿ ಸದಸ್ಯ ಎದ್ದು ನಿಂತು ಅದು ಸರಿಮಾಡಿಲ್ಲ, ಇದು ತಪ್ಪಾಗಿದೆ ಎಂದು ಅಧಿಕಾರಿಗಳಿಗೆ ಕೇಳುತ್ತಿದ್ದರು. ಇದರಿಂದ ಅಧಿಕಾರಿಗಳು ಶಾಸಕರ ಉತ್ತರ ನೀಡುವ ಬದಲಿಗೆ ಸದಸ್ಯನಿಗೆ ಹೆಚ್ಚಾಗಿ ಉತ್ತರ ನೀಡಿದ್ದಾರೆ.