ಹಾನಗಲ್:ತಾಲೂಕಿನ ಕೆಲ ಗ್ರಾಮಗಳಲ್ಲಿನ ಹಸುಗಳಿಗೆ ಚರ್ಮ ಗಂಟು(ಲಂಪಿ ಸ್ಕಿನ್ ಡಿಸಿಸ್) ರೋಗ ಕಾಣಿಸಿಕೊಳ್ಳತೊಡಗಿದ್ದು, ನಿಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಶಾಸಕ ಸಿ.ಎಂ.ಉದಾಸಿ ಸಲಹೆ ನೀಡಿದ್ದಾರೆ.
ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಶಾಸಕ ಸಿ.ಎಂ.ಉದಾಸಿ - MLA C.M Udasi
ಹಾನಗಲ್ ತಾಲೂಕಿನ ಕೆಲ ಗ್ರಾಮಗಳಲ್ಲಿನ ದನ - ಕರುಗಳಿಗೆ ಚರ್ಮ ಗಂಟು ಎಂಬ ರೋಗ ವ್ಯಾಪಿಸತೊಡಗಿದ್ದು, ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯತೆ ಇದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.
ಚರ್ಮ ಗಂಟು ರೋಗ ವೈರಸ್ನಿಂದಾಗಿ ದನ - ಕರುಗಳಿಗೆ ಹರಡುತ್ತಿದ್ದು, ಜಾನುವಾರುಗಳಿಗೆ ಕಚ್ಚುವ ನೊಣಗಳಿಂದ, ಉಣ್ಣೆಗಳಿಂದ ಹಾಗೂ ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಈ ರೋಗ ಹರಡುತ್ತದೆ. ಮಾತ್ರವಲ್ಲದೇ, ಕಲುಷಿತ ನೀರು ಹಾಗೂ ಮೇವಿನಿಂದಲೂ ಈ ರೋಗ ಹರಡುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ದನ-ಕರುಗಳನ್ನು ಸುರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಇದೇ ವೇಳೆ ಉದಾಸಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಪಶು ವೈದ್ಯಾಧಿಕಾರಿಗಳು ಈಗಾಗಲೇ ಗ್ರಾಮಗಳಿಗೆ ತೆರಳಿ ತಪಾಸಣೆ ಮಾಡುತಿದ್ದು, ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೇ ವೇಳೆ, ಮಾಹಿತಿ ನೀಡಿದ್ದಾರೆ.