ಹಾನಗಲ್: ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುದ್ಧವಾದ ಪರಿಸರ ನಿರ್ಮಿಸಿ, ಆ ಪರಿಸರದ ನಡುವೆ ಪಕ್ಷಿಗಳಿಗೆ ನೀರನ್ನಿಟ್ಟು ಪಕ್ಷಿ ಕಾಳಜಿ ಮೆರೆಯಲಾಗಿದೆ.
ಹಾನಗಲ್: ಪಕ್ಷಿಗಳ ನೀರಿನ ದಾಹ ನೀಗಿಸುತ್ತಿದೆ ತಹಶೀಲ್ದಾರ್ ಕಚೇರಿ - hanagal Tahsildar office
ಬೇಸಿಗೆಯ ತಾಪ ಹೇಳತೀರದಂತಾಗಿದ್ದು, ಬಿರು ಬಿಸಿಲಿಗೆ ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುತ್ತವೆ. ಹಾಗಾಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುದ್ಧವಾದ ಪರಿಸರ ನಿರ್ಮಿಸಿ, ಆ ಪರಿಸರದ ನಡುವೆ ಪಕ್ಷಿಗಳಿಗೆ ನೀರನ್ನಿಟ್ಟು ಪಕ್ಷಿ ಕಾಳಜಿ ಮೆರೆಯಲಾಗಿದೆ.
ಹೌದು, ಬೇಸಿಗೆ ಬಂತೆಂದರೆ ಸಾಕು ಬಿರು ಬಿಸಿಲಿಗೆ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುತ್ತವೆ. ಹಾಗಾಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನೀರಿನ ಬುಟ್ಟಿಗಳನ್ನಿಡುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸಲಾಗುತ್ತಿದೆ.
ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿಯ ಈ ಪ್ರಯತ್ನಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ತಹಶೀಲ್ದಾರ್ ಕಚೇರಿ ಆವರಣ ಪರಿಶುದ್ಧ ವಾತಾವರಣದಿಂದ ಕೂಡಿದ್ದು, ಕಚೇರಿಗೆ ಬಂದ ಜನತೆ ತಂಪಾದ ಗಾಳಿ ಪಡೆದು, ನಿಸರ್ಗದ ಸೌಂದರ್ಯ ಅನುಭವಿಸುತ್ತಿದ್ದಾರೆ. ಮನುಷ್ಯರಂತೆ ಪ್ರಾಣಿ-ಪಕ್ಷಿಗಳಿಗೂ ಸೂಕ್ತ ಸಮಯದಲ್ಲಿ ನೀರು ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಅಂತಾರೆ ಇಲ್ಲಿಯ ಸಿಬ್ಬಂದಿ ವರ್ಗ.