ಕರ್ನಾಟಕ

karnataka

ಸೋಂಕಿನಿಂದ ಗುಣಮುಖರಾದ ತಹಶೀಲ್ದಾರ್ ಕೊಟೂರು, ಕೊರೊನಾಗೆ ಭಯ ಬೇಡ ಅಂದರು..

By

Published : Jul 28, 2020, 9:16 PM IST

ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡು ಬಂದ್ರೆ ಮಾತ್ರೆಗಳನ್ನು ತಗೆದುಕೊಳ್ಳಬೇಕು..

Tahashildar basanagowda kotooru
Tahashildar basanagowda kotooru

ಹಾವೇರಿ: ರಾಣೇಬೆನ್ನೂರು ತಾಲೂಕಿನ ತಹಶೀಲ್ದಾರ್ ಬಸನಗೌಡ ಕೊಟೂರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮತ್ತೆ ಸೇವೆಗೆ ಮರಳಿದ್ದಾರೆ.

ಕೊರೊನಾ ವೈರಸ್ ಕುರಿತು ಮಾತನಾಡಿದ ಅವರು, ಕೊರೊನಾ ರೋಗಕ್ಕೆ ಜನತೆ ಭಯ ಪಡಬೇಕಾಗಿಲ್ಲ. ಇದೊಂದು ವೈರಸ್ ಆಗಿದ್ದು, ಸೋಂಕು ತಡೆಗೆ ಜನರು ಪ್ರತಿದಿನ ಬೆಳಗ್ಗೆ ಬಿಸಿ ನೀರು ಕುಡಿಯಬೇಕು. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ದಿನ ನಿತ್ಯದ ಕೆಲಸಗಳನ್ನು ಮಾಡಬೇಕು ಎಂದರು.

ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡು ಬಂದ್ರೆ ಮಾತ್ರೆಗಳನ್ನು ತಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅವಶ್ಯಕತೆ ಇದ್ದರೆ ಮಾತ್ರ ಕಚೇರಿಗೆ ಬನ್ನಿ :ಸೋಂಕು ದೃಢಪಟ್ಟ ಹಿನ್ನೆಲೆ ತಹಶೀಲ್ದಾರ್ ಕಾರ್ಯಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಆದೇಶದಂತೆ ಕಚೇರಿಯನ್ನು ತೆರೆಯಲಾಗಿದೆ. ತಾಲೂಕಿನ ಜನರು ಅವಶ್ಯಕತೆ ಕೆಲಸ ಇದ್ದರೆ ಮಾತ್ರ ಕಾರ್ಯಾಲಯಕ್ಕೆ ಬರಬೇಕು ಎಂದು ತಿಳಿಸಿದರು.

ABOUT THE AUTHOR

...view details