ಹಾವೇರಿ: ಸರ್ಕಾರ ಅನುಮತಿ ನೀಡಿ ಹಲವು ದಿನಗಳಾದರು ಹಾವೇರಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿರುವ ಈಜುಕೊಳ ಆರಂಭವಾಗಿಲ್ಲ. ಈಜುಕೊಳ ಆರಂಭವಾಗದಿರುವುದು ಈಜು ಪ್ರಿಯರಿಗೆ ಬೇಸರ ತರಿಸಿದ್ದು, ಸರ್ಕಾರದ ನಿಯಮದಂತೆ ಈಜುಕೊಳದಲ್ಲಿ ಅಭ್ಯಸಕ್ಕೆ ಅವಕಾಶ ನೀಡಬೇಕು ಎಂದು ಈಜು ಪ್ರಿಯರು ಒತ್ತಾಯಿಸಿದ್ದಾರೆ.
ಇನ್ನೂ ಆರಂಭವಾಗದ ಈಜುಕೊಳ: ಈಜು ಪ್ರಿಯರಿಂದ ಬೇಸರ ವ್ಯಕ್ತ... - Haveri Swimming Pool News
ಕೊರೊನಾದಿಂದಾಗಿ ಮಾರ್ಚ್ ತಿಂಗಳಿಂದ ಬಂದ್ ಮಾಡಿದ್ದ ಹಾವೇರಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿರುವ ಈಜುಕೊಳ ಇನ್ನು ಆರಂಭವಾಗದಿದ್ದಕ್ಕೆ ಈಜು ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈಜುಕೊಳ
ಕೊರೊನಾದಿಂದಾಗಿ ಮಾರ್ಚ್ ತಿಂಗಳಿಂದ ಈಜುಕೊಳ ಬಂದ್ ಆಗಿದೆ. ಬಂದ್ ಇದ್ದಾಗ ಈಜುಕೊಳ ರಿಪೇರಿ ಮಾಡಿಸದ ಸಿಬ್ಬಂದಿ ಅನುಮತಿ ನೀಡಿದ ನಂತರ ರಿಪೇರಿಗೆ ಮುಂದಾಗಿದ್ದಾರೆ. ಇದು ಈಜು ಪ್ರಿಯರಿಗೆ ಬೇಸರ ತರಿಸಿದ್ದು, ಪ್ರತಿನಿತ್ಯ ಈಜುಕೊಳಕ್ಕೆ ಬರುವ ಈಜು ಪಟುಗಳು ಈಜುಕೊಳ ಆರಂಭವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಜಿಲ್ಲಾ ಕೇಂದ್ರದಲ್ಲಿ ಈಜುಕೊಳ ಬಂದ್ ಆಗಿದೆ. ಹೀಗಾದರೆ ನಾವು ಎಲ್ಲಿ ಪ್ರಾಕ್ಟಿಸ್ ಮಾಡಬೇಕು ಎಂದು ಇಲ್ಲಿಯ ಈಜುಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ.