ರಾಣೆಬೆನ್ನೂರು (ಹಾವೇರಿ):ತಾಲೂಕಿನ ಆರೇಮಲ್ಲಾಪುರ ಗ್ರಾಮದ ಬಡ ಜನರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಇಂದು ವಿವಿಧ ಮಠದ ಸ್ವಾಮೀಜಿಗಳು ನಗರದಲ್ಲಿ ಪಾದಯಾತ್ರೆ ನಡೆಸಿದರು.
ಆರೇಮಲ್ಲಾಪುರ ಬಡ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ
ರಾಣೆಬೆನ್ನೂರಿನ ಆರೇಮಲ್ಲಾಪುರ ಗ್ರಾಮದ ಬಡ ಜನರಿಗೆ ನಿವೇಶನ ನೀಡುವಂತೆ ವಿವಿಧ ಮಠದ ಸ್ವಾಮೀಜಿಗಳು ನಗರದಲ್ಲಿ ಪಾದಯಾತ್ರೆ ನಡೆಸಿದರು.
ಆರೇಮಲ್ಲಾಪುರ ಬಡ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ
ರಾಣೆಬೆನ್ನೂರು ತಾಲೂಕಿನ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಆರೇಮಲ್ಲಾಪುರ ಗ್ರಾಮದ ಜನರ ಒಳಿತಿಗಾಗಿ ಹೋರಾಟ ಮಾಡಲಾಗುತ್ತಿದೆಯೇ ಹೊರತು, ನನ್ನ ಹಿತಾಸಕ್ತಿಗೋಸ್ಕರವಲ್ಲ. ಈ ಹೋರಾಟಕ್ಕೆ ಹಲವು ಬಾರಿ ಕೊಲೆ ಬೆದರಿಕೆ ಬಂದಿದೆ. ಇಂತಹ ಹೆದರಿಕೆ, ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಬಂಜಾರ ಪೀಠದ ಸರ್ದಾರ ಸೇವಾಲಾಲ್ ಸ್ವಾಮೀಜಿ, ಕಾಳಿ ಮಠದ ಖುಷಿಕುಮಾರ ಸ್ವಾಮೀಜಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.