ಕರ್ನಾಟಕ

karnataka

ETV Bharat / state

ಅರವತ್ತೆರಡು ದಿನಗಳ ಬಳಿಕ ಗುಹೆಯಿಂದ ಹೊರಬಂದ ಬಂಜಾರಾ ಗುರುಪೀಠದ ಸ್ವಾಮೀಜಿ - haveri news

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕೃಷ್ಣಾಪುರ ತಾಂಡಾದಲ್ಲಿರೋ ಬಂಜಾರಾ ಗುರುಪೀಠದ ಸ್ವಾಮೀಜಿ 62 ದಿನ ಸಿದ್ಧಿ ಸಮಾಧಿ ಅನುಷ್ಠಾನಕ್ಕೆ ಕುಳಿತಿದ್ದರು.ಇದೀಗ ಅವರು ಗುಹೆಯಿಂದ ಹೊರಬಂದಿದ್ದಾರೆ‌.

ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನ
ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನ

By

Published : Sep 10, 2020, 10:35 PM IST

ಹಾವೇರಿ: ಲೋಕಕಲ್ಯಾಣಕ್ಕಾಗಿ 62 ದಿನಗಳಿಂದ ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನಕ್ಕೆ ಕುಳಿತಿದ್ದ, ಬಂಜಾರಾ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಗುಹೆಯಿಂದ ಹೊರಬಂದಿದ್ದಾರೆ‌.

ಗುಹೆಯಿಂದ ಹೊರಬಂದ ಬಂಜಾರಾ ಗುರುಪೀಠದ ಸ್ವಾಮೀಜಿ

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೃಷ್ಣಾಪುರ ತಾಂಡಾದಲ್ಲಿರೋ ಬಂಜಾರಾ ಗುರುಪೀಠದ ಸ್ವಾಮೀಜಿ ಆಗಿರೋ ಕುಮಾರ ಮಹಾರಾಜ ಸ್ವಾಮೀಜಿ ಅರವತ್ತೆರಡು ದಿನಗಳಿಂದ ನಿರಾಹಾರ ಮೌನ ಅನುಷ್ಠಾನಕ್ಕೆ ಕುಳಿತಿದ್ದರು. ಗಾಳಿ, ಬೆಳಕು ಬಾರದಂತಿರುವ ಗುಹೆಯಲ್ಲಿ ಸಿದ್ಧಿ ಸಮಾಧಿ ಅನುಷ್ಠಾನಕ್ಕೆ ಕುಳಿತಿದ್ದರು. ಭಕ್ತರ ಸಮ್ಮುಖದಲ್ಲಿ ಸ್ವಾಮೀಜಿ ಗುಹೆಯಿಂದ ಹೊರಬಂದಿದ್ದಾರೆ.

ಗುಹೆಯಿಂದ ಹೊರಬಂದ ಬಂಜಾರಾ ಗುರುಪೀಠದ ಸ್ವಾಮೀಜಿ

ನಿರಾಹಾರ ಮೌನ ಅನುಷ್ಠಾನಕ್ಕೆ ಕುಳಿತಿದ್ದ ಸ್ವಾಮೀಜಿಯನ್ನ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಸ್ವಾಗತಿಸಿದ್ರು. ಕಳೆದ ಕೆಲವು ತಿಂಗಳುಗಳ ಹಿಂದೆ ಕುಮಾರ ಮಹಾರಾಜ ಸ್ವಾಮೀಜಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರದಲ್ಲಿ ಸಿದ್ದಿ ಸಮಾಧಿ ಅನುಷ್ಠಾನ ಕೈಗೊಂಡಿದ್ದರು.

ABOUT THE AUTHOR

...view details