ಕರ್ನಾಟಕ

karnataka

ETV Bharat / state

ಕೃಷಿ ಸಚಿವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿ ಅಮಾನತು - vaccinated to the Minister of Agriculture

ಡಾ.ಝಡ್.ಆರ್.ಮಕಾಂದರ್ ಅವರು ಕೃಷಿ ಸಚಿವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದರು. ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಎಲ್ಲ ಕಾರಣಗಳ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ.

suspension of health officer who vaccinated to the Minister of Agriculture
ಕೃಷಿ ಸಚಿವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿ ಅಮಾನತು

By

Published : Apr 2, 2021, 9:52 AM IST

ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆರೋಗ್ಯಾಧಿಕಾರಿಯನ್ನ ಸೇವೆಯಿಂದ ಅಮಾನತು ಮಾಡಲಾಗಿದೆ.

ಆರೋಗ್ಯಾಧಿಕಾರಿ ಅಮಾನತು

ಡಾ.ಝಡ್.ಆರ್.ಮಕಾಂದರ್ ಅಮಾನತ್ತಾದ ಆರೋಗ್ಯಾಧಿಕಾರಿ. ಮಕಾಂದರ್ ಮಾರ್ಚ್ ಎರಡರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಅವರಿಗೆ ಮತ್ತು ಅವರ ಪತ್ನಿ ವನಜಾ ಪಾಟೀಲ್‌ಗೆ ಕೋವಿಡ್ ಲಸಿಕೆ ನೀಡಿದ್ದರು. ಆರೋಗ್ಯಾಧಿಕಾರಿಗಳ ಈ ನಡೆ ತೀವ್ರ ವಿವಾದಕ್ಕೆ ಒಳಗಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ಡಾ.ತ್ರಿಲೋಕಚಂದ್ರ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮಕಾಂದರ್​ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ABOUT THE AUTHOR

...view details