ಹಾವೇರಿ:ಜಿಲ್ಲೆಯಲ್ಲಿ ಗುರುವಾರ ಕಂಡುಬಂದಿದ್ದ ಕೊರೊನಾ ಶಂಕಿತ ಯುವಕನ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ನಾಗರಾಜ್ ನಾಯಕ್ ತಿಳಿಸಿದರು.
ಸಿಂಗಾಪುರದಿಂದ ಹಾವೇರಿಗೆ ಬಂದ ಕೊರೊನಾ ಶಂಕಿತ ಯುವಕನ ಪರೀಕ್ಷಾ ವರದಿ ನೆಗೆಟಿವ್ - 'Suspected Corona Virus
ಸಿಂಗಾಪುರದಿಂದ ಹಾವೇರಿಗೆ ಬಂದಿದ್ದ ಯುವಕನ ಗಂಟಲು ದ್ರವ ಮತ್ತು ರಕ್ತದ ಮಾದರಿಯ ವರದಿ ನೆಗೆಟಿವ್ ಬಂದಿದೆ.
ಶಂಕಿತನ ಪರೀಕ್ಷಾ ವರದಿ ನೆಗೆಟಿವ್
ಸಿಂಗಾಪುರದಿಂದ ಕೆಲವು ದಿನಗಳ ಹಿಂದೆ ಹಾವೇರಿಗೆ ಆಗಮಿಸಿದ್ದ ಯುವಕನಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ತಪಾಸಣೆ ನಡೆಸಲಾಗಿತ್ತು.
ಯುವಕನ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗ ಲ್ಯಾಬ್ಗೆ ಕಳಿಸಿಕೊಡಲಾಗಿತ್ತು. ಇದೀಗ ವರದಿ ನೆಗೆಟಿವ್ ಬಂದಿದೆ.