ರಾಣೆಬೆನ್ನೂರು: ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸಬೇಕೆಂದು ಶಾಸಕ ಅರುಣಕುಮಾರ ಪೂಜಾರ ಸಲಹೆ ನೀಡಿದರು.
ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಬೇಕು: ಶಾಸಕ ಅರುಣಕುಮಾರ ಪೂಜಾರ - MLA Arun kumar poojar
ರಾಣೇಬೆನ್ನೂರಿನ ಮೃತ್ಯುಂಜಯ ಸಮುದಾಯ ಭವನದಲ್ಲಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.
![ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಬೇಕು: ಶಾಸಕ ಅರುಣಕುಮಾರ ಪೂಜಾರ Suko Bank's silver festive event](https://etvbharatimages.akamaized.net/etvbharat/prod-images/768-512-5526934-thumbnail-3x2-net.jpg)
ನಗರದ ಮೃತ್ಯುಂಜಯ ಸಮುದಾಯ ಭವನದಲ್ಲಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಾಲದಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಉತ್ತಮವಾಗಿ ವ್ಯವಹಾರ ಕೊಡುತ್ತಿದ್ದು, ಎಲ್ಲರಿಗೂ ಅನುಕೂಲ ಕಲ್ಪಿಸುತ್ತಿವೆ. ಸುಕೋ ಬ್ಯಾಂಕ್ ಕೂಡ ರಾಣೆಬೆನ್ನೂರ ನಗರದಲ್ಲಿ ತನ್ನ ಶಾಖೆಯನ್ನು ತೆಗೆದು ಜನರಿಗೆ ಅನುಕೂಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 25ನೇ ವರ್ಷದ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಸಂಸದ ಶಿವಕುಮಾರ ಉದಾಸಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಜಿ.ಜಿ.ಹೊಟ್ಟಿಗೌಡ, ಮಲ್ಲೇಶ ಸಾಲಿಮನಿ ಉಪಸ್ಥಿತರಿದ್ದರು.