ಕರ್ನಾಟಕ

karnataka

ETV Bharat / state

ಕಬ್ಬು ಒಣಗುವಿಕೆ ಸಮಸ್ಯೆ.. ನಷ್ಟದ ಆತಂಕದಲ್ಲಿರುವ ಹಾವೇರಿ ರೈತರು

ಜಿಎಂ ಸಿದ್ದೇಶ್ವರ ಸಂಬಂಧಿ ಒಡೆತನದಲ್ಲಿರುವ ಹಾವೇರಿ ಸಂಗೂರು ಸಕ್ಕರೆ ಕಾರ್ಖಾನೆಗೆ ಕಬ್ಬು ನುರಿಸುವ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಕಬ್ಬು ಬರುತ್ತಿದೆ. ಇದರಿಂದಾಗಿ ಕಬ್ಬು ಒಣಗಿ ಪ್ರತಿ ವಾಹನಕ್ಕೆ ಒಂದರಿಂದ ಎರಡು ಟನ್ ತೂಕ ಕಡಿಮೆಯಾಗುತ್ತಿದೆ. ಪ್ರತಿ ವಾಹನಕ್ಕೆ ನಾಲ್ಕರಿಂದ ಐದು ಸಾವಿರ ರೂಪಾಯಿ ನಷ್ಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

By

Published : Jan 28, 2022, 9:34 AM IST

sugarcane
ಕಬ್ಬು ಒಣಗುವಿಕೆ ಸಮಸ್ಯೆ ಎದುರಿಸುತ್ತಿರುವ ರೈತರು

ಹಾವೇರಿ: ಕಬ್ಬು ಬೆಳೆಗಾರರು ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಲೆ ಇದ್ದಾಗ ಉತ್ತಮ ಇಳುವರಿ ಇರುವುದಿಲ್ಲ, ಉತ್ತಮ ಇಳುವರಿ ಇದ್ದಾಗ ಬೆಲೆ ಇರುವುದಿಲ್ಲ. ಎಲ್ಲ ಸರಿಯಿದ್ದರೂ ಕಾರ್ಖಾನೆ ಮಾಲೀಕರು ಸಮಯಕ್ಕೆ ಸರಿಯಾಗಿ ಹಣ ಪಾವತಿ ನೀಡುವುದಿಲ್ಲ. ಪ್ರಸ್ತುತ ಹಾವೇರಿ ಜಿಲ್ಲೆಯ ರೈತರು ಕಬ್ಬು ಒಣಗುವಿಕೆ ಸಮಸ್ಯೆ ಎದುರಿಸುತ್ತಿದ್ದಾರೆ.

ಜಿಎಂ ಸಿದ್ದೇಶ್ವರ ಸಂಬಂಧಿ ಒಡೆತನದಲ್ಲಿರುವ ಹಾವೇರಿ ಸಂಗೂರು ಸಕ್ಕರೆ ಕಾರ್ಖಾನೆಗೆ ಕಬ್ಬು ನುರಿಸುವ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಕಬ್ಬು ಬರುತ್ತಿದೆ. ಚಕ್ಕಡಿ, ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ರೈತರು ಕಬ್ಬು ತುಂಬಿಕೊಂಡು ಕಾರ್ಖಾನೆಗೆ ಬರುತ್ತಿದ್ದಾರೆ.

ಆದರೆ, ಕಾರ್ಖಾನೆಯಲ್ಲಿ ರೈತರ ಪಾಳೆಯ ಬರಲು ಮೂರರಿಂದ ನಾಲ್ಕುದಿನ ಕಾಯಬೇಕು. ಇದರಿಂದಾಗಿ ಕಬ್ಬು ಒಣಗಿ ಪ್ರತಿ ವಾಹನಕ್ಕೆ ಒಂದರಿಂದ ಎರಡು ಟನ್ ಕಬ್ಬಿನ ತೂಕ ಕಡಿಮೆಯಾಗುತ್ತಿದೆ. ಹೀಗಾಗಿ, ಪ್ರತಿ ವಾಹನಕ್ಕೆ ತಮಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ನಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ರೈತರು.

ಕಬ್ಬು ಒಣಗುವಿಕೆ ಸಮಸ್ಯೆ ಎದುರಿಸುತ್ತಿರುವ ರೈತರು

ಇನ್ನು ಕಾರ್ಖಾನೆ ಆವರಣದ ಜಾಗ ಟ್ರ್ಯಾಕ್ಟರ್‌ಗಳನ್ನ ನಿಲ್ಲಲು ಯೋಗ್ಯವಾಗಿಲ್ಲ ಎಂದು ಚಾಲಕರು ಆರೋಪಿಸುತ್ತಿದ್ದಾರೆ. ಕಾರ್ಖಾನೆ ಆವರಣದ ಜಾಗದಲ್ಲಿ ಗುಂಡಿಗಳಿವೆ. ಡಬಲ್ ಟ್ರಾಲಿಯಲ್ಲಿ ಕಬ್ಬು ಹಾಕಿಕೊಂಡು ಬರುವುದರಿಂದ ಎಂಜಿನಗಳು ಮೇಲೆ ಎದ್ದು ತಗ್ಗು ಬೀಳುತ್ತವೆ. ಗುಂಡಿ ಮುಚ್ಚಿಸದ ಕಾರಣ ಕೈಯಲ್ಲಿ ಜೀವ ಹಿಡಿದು ಟ್ರ್ಯಾಕ್ಟರ್ ಚಾಲನೆ ಮಾಡಬೇಕಾಗುತ್ತದೆ. ಟ್ರ್ಯಾಕ್ಟರ್ ಬಾಡಿಗೆ, ಚಾಲಕರ ಭತ್ಯೆ ಹೊರೆ ಬೀಳುತ್ತಿದೆ ಎಂದು ಚಾಲಕರು ತಿಳಿಸಿದ್ದಾರೆ.

ಕಬ್ಬು ಕಡಿದು ಕಾರ್ಖಾನೆಗೆ ಬರಲು ಜಮೀನಿನಲ್ಲಿ ಎರಡು ದಿನ ಕಾಯಬೇಕಾಗುತ್ತದೆ. ಕಾರ್ಖಾನೆಗೆ ಬಂದ ನಂತರ ನಮ್ಮ ಸರದಿ ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಕಾರ್ಖಾನೆ ಮಾಲೀಕರು ನುರಿಸುವಿಕೆ ಹೆಚ್ಚು ಮಾಡಬೇಕು. ಇಲ್ಲವೇ ತಮಗೆ ಸರಿಯಾದ ದಿನಾಂಕ ನೀಡಿದರೆ ಆ ದಿನಾಂಕದಂದು ನಾವು ಕಾರ್ಖಾನೆಗೆ ಕಬ್ಬು ತರುತ್ತೇವೆ ಎನ್ನುತ್ತಿದ್ದಾರೆ ಕಬ್ಬು ಬೆಳೆಗಾರರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details