ಕರ್ನಾಟಕ

karnataka

ETV Bharat / state

ನಟ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆ ನೋಟ್ ಬುಕ್ ವಿತರಿಸಿದ ಅಭಿಮಾನಿಗಳು - ಹುಟ್ಟುಹಬ್ಬ

ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್ ಹುಟ್ಟ ಹಬ್ಬದ ಹಿನ್ನೆಲೆ ರಾಣೆಬೆನ್ನೂರಿನ ಅವರ ಅಭಿಮಾನಿಗಳು ಅಂಧ ಮಕ್ಕಳಿಗೆ ನೋಟ್ ಬುಕ್ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿ ಸರಳವಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ರು.

sudeep birthday celebration
ನಟ ಸುದೀಪ್ ಹುಟ್ಟು ಹಬ್ಬ

By

Published : Sep 2, 2020, 11:19 PM IST

ರಾಣೆಬೆನ್ನೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟ ಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಅಂಧ ಮಕ್ಕಳಿಗೆ ನೋಟ್ ಬುಕ್, ಉಣ್ಣೆ ಸ್ವೆಟರ್ ನೀಡುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದರು.

ನಟ ಸುದೀಪ್ ಹುಟ್ಟು ಹಬ್ಬ
ರಾಣೆಬೆನ್ನೂರ ‌ನಗರದಲ್ಲಿರುವ ರೇಣುಕಾ ಎಲ್ಲಮ್ಮ ಕಿವುಡ ಮತ್ತು ಮೂಕ ವಸತಿ ಶಾಲೆಯ ಮಕ್ಕಳಿಗೆ ವಸ್ತುಗಳನ್ನು ವಿತರಣೆ ಮಾಡುವ ಮೂಲಕ ಸುದೀಪ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಯೋಧ ಪ್ರಕಾಶ ತಳವಾರ ಮಾತನಾಡಿ, ಯಾವುದೇ ವ್ಯಕ್ತಿಯ ಹುಟ್ಟು ಹಬ್ಬವನ್ನು ಅನಾವಶ್ಯಕ ದುಂದು ವೆಚ್ಚ ಮಾಡದೆ, ಇಂತಹ ಅಂಧ ಮಕ್ಕಳಿಗೆ ನೋಟ್ ಬುಕ್ ಮತ್ತು ಅವಶ್ಯಕತೆ ಸಾಮಾಗ್ರಿಗಳನ್ನು ವಿತರಣೆ ಮಾಡಿರುವುದು ಸಂತೋಷದ ವಿಷಯವಾಗಿದೆ. ಇದೇ ರೀತಿ ಇತರರು ಮಾದರಿಯಾಗಬೇಕು ಎಂದು ಹೇಳಿದರು.ನಂತರ ದೇಶ ಸೇವೆಯಲ್ಲಿ ತೊಡಗಿರುವ ಯೋಧ ಪ್ರಕಾಶ ತಳವಾರ ಅವರನ್ನು ಕಿಚ್ಚ ಸುದೀಪ ಅಭಿಮಾನಿಗಳ ವತಿಯಿಂದ ಸನ್ಮಾನಿಸಲಾಯಿತು.

ABOUT THE AUTHOR

...view details