ಹಾವೇರಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತ ನವೀನ್ ಸ್ನೇಹಿತೆ ಪ್ರತಿಭಾ ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಾಟ್ಸ್ಆ್ಯಪ್ ಕರೆ ಮಾಡಿದ ಪ್ರತಿಭಾ ಅಲ್ಲಿನ ಭಯಾನಕ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕೃಷ್ಣಾ ಎಂಬುವವರಿಗೆ ಕರೆ ಮಾಡಿದ ಮೃತ ನವೀನ್ ಸ್ನೇಹಿತೆ ಪ್ರತಿಭಾ, ಖಾರ್ಕೀವ್ನಲ್ಲಿ ಇರುವವರೆಲ್ಲ ಕರ್ನಾಟಕ ಮೂಲದ ವಿದ್ಯಾರ್ಥಿಗಳು. ಹತ್ತು ಗಂಟೆಗೆ ಕರ್ಫ್ಯೂ ತೆರವಾಗುವ ಹಿನ್ನೆಲೆಯಲ್ಲಿ ಆ ಸಮಯದಲ್ಲಿ ಹೊರಗೆ ಬಂದು ಪೋಲೆಂಡ್ ಗಡಿಭಾಗಕ್ಕೆ ಬರಲು ನಿರ್ಧಾರ ಮಾಡಿದ್ದೇವೆ.