ಕರ್ನಾಟಕ

karnataka

ETV Bharat / state

ಪುತ್ರ ಶೋಕಂ ನಿರಂತರಂ.. ಅಗಲಿದ ಮಗನ ನೆನೆದು ಹೆತ್ತ ಕರುಳಿನ ಆಕ್ರಂದನ - student from karntaka died in russia shell attack

Karnataka student dies in Ukraine war.. ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ನೆನೆದು ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನೂ ನವೀನ್ ನನ್ನು ನೆನೆದು ಕಣ್ಣೀರಿಡುತ್ತಿದ್ದಾನೆ. ಘಟನೆ ಸಂಬಂಧ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಸಿಇಓ ಮೊಹಮ್ಮದ್ ರೋಷನ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸದ್ಯ ಮೃತದೇಹವನ್ನು ತರುವ ಬಗ್ಗೆ ಜಿಲ್ಲಾಧಿಕಾರಿ ಕುಟುಂಬದವರೊಂದಿಗೆ ಚರ್ಚಿಸಿರುವುದಾಗಿ ತಿಳಿದುಬಂದಿದೆ.

student-from-karnataka-died-in-russia-shell-attack-in-ukrain
ಪುತ್ರ ಶೋಕಂ ನಿರಂತರಂ ಎಂಬಂತೆ ನವೀನ್ ಮನೆಯಲ್ಲಿ ಮುಂದುವರೆದ ಆಕ್ರಂದನ, ಬಿಕ್ಕಿ ಬಿಕ್ಕಿ ಅತ್ತ ತಾಯಿ...!

By

Published : Mar 2, 2022, 1:18 PM IST

Updated : Mar 2, 2022, 1:49 PM IST

ಹಾವೇರಿ: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ವೈಮಾನಿಕ ಶೆಲ್ ದಾಳಿಗೆ ಬಲಿಯಾದ ನವೀನ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ಕಳೆದುಕೊಂಡಿರುವ ತಾಯಿ ವಿಜಯಲಕ್ಷ್ಮಿ ಪುತ್ರನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನವೀನ್ ಎಲ್ಲೋ ನೀ, ಇವಾಗ ಇಲ್ವಲ್ಲಪ್ಪ ನೀನು ಎಂದು ಗೋಗರೆಯುತ್ತಿರುವ ತಾಯಿಯ ಆಕ್ರಂದನ ಕರುಳು ಹಿಂಡುವಂತಿದೆ.

ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ..

ಹೌದು, ತಾಯಿಯಿಂದ ದೂರ ಆಗಿರುವ ನವೀನ್ ನ ಮುಖವನ್ನಾದರೂ ಒಮ್ಮೆ ನೋಡಬೇಕೆಂದು ಹೆತ್ತ ಕರುಳು ಹಂಬಲಿಸುತ್ತಿದೆ. ಮಗನ ಪಾರ್ಥಿವ ಶರೀರ ವಿದೇಶದಿಂದ ಬರುತ್ತೆ ಎಂದು ಇಡೀ ಕುಟುಂಬ ಕಾಯುತ್ತಿದೆ. ನವೀನ್​ನ್ನು ನೆನೆದು ಸಹೋದರ ಸಹ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವೇಳೆ ಸಮಾಧಾನ ಮಾಡಲು ಬಂದಿದ್ದ ಮಹಿಳೆಯರ ಕಣ್ಣಾಲೆಗಳು ಸಹ ತುಂಬಿ ಬಂದಿವೆ. ನನ್ನ ಮಗನನ್ನು ವಾಪಸ್​ ತಗೊಂಡು ಬರ್ರಿ ಎನ್ನುತ್ತಿರುವ ಹೆತ್ತ ಕರುಳಿನ ಸಂಕಟ ಮನಕಲಕುವಂತಿದೆ. ನವೀನ್ ತಾಯಿ ಸಂತೈಸಲು ಸಂಬಂಧಿಕರು ಮುಂದಾಗಿದ್ದು, ಈ ವೇಳೆ ತಾಯಿ ನಿತ್ರಾಣರಾಗಿದ್ದರು ಎಂದು ತಿಳಿದುಬಂದಿದೆ.

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮ ಮೃತ ನವೀನ್​ನ ನಿವಾಸಕ್ಕೆ ಹಾವೇರಿ ಜಿಲ್ಲಾಧಿಕಾರಿ ಸಂಜಯ್​ ಶೆಟ್ಟೆಣ್ಣವರ ಹಾಗೂ ಸಿಇಓ ಮೊಹಮ್ಮದ್ ರೋಷನ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಶೇಖರಗೌಡ ಗ್ಯಾನಗೌಡರ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಜಿಲ್ಲಾಡಳಿತ ನವೀನ್ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿ ಮೃತದೇಹವನ್ನು ತಾಯ್ನಾಡಿಗೆ ಕರೆತರುವ ಬಗ್ಗೆ ಚರ್ಚಿಸಿದ್ದಾರೆ.

ಓದಿ :ಉಕ್ರೇನ್​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿಯ ಯುವಕನ ಮೃತದೇಹ ಪತ್ತೆ

Last Updated : Mar 2, 2022, 1:49 PM IST

ABOUT THE AUTHOR

...view details