ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಬೀದಿ ನಾಯಿ ದಾಳಿ: 8 ಜನರಿಗೆ ಗಾಯ - undefined

ಬೀದಿ ನಾಯಿಯೊಂದು ಜನರ ಮೇಲೆ ದಾಳಿ ಮಾಡಿದ ಪರಿಣಾಮ 8 ಜನ ಗಾಯಗೊಂಡಿರುವ ಘಟನೆ ಹಾವೇರಿ ರೈಲು ನಿಲ್ದಾಣದ ಬಳಿ ನಡೆದಿದೆ.

ಬೀದಿ ನಾಯಿ ದಾಳಿ

By

Published : Mar 30, 2019, 6:46 PM IST

ಹಾವೇರಿ: ನಗರದ ರೈಲು ನಿಲ್ದಾಣದ ಬಳಿ ಬೀದಿ ನಾಯಿಯೊಂದು ಜನರ ಮೇಲೆ ದಾಳಿ ಮಾಡಿದೆ. 8 ಜನರನ್ನ ನಾಯಿ ಕಡಿದು ಗಾಯಗೊಳಿಸಿದ್ದು, ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳನ್ನು ಭಾಷಾಸಾಬ್, ಮುಬಾರಕ್, ಶಿವಮೂರ್ತಿ, ಬಸವರಾಜ್ ಮೂಲಿಮನಿ‌ ಮತ್ತು ನಿಂಗಪ್ಪ ಬಣಕಾರ ಎಂದು ಗುರುತಿಸಲಾಗಿದೆ. ಕಣ್ಣು, ಕೈ, ಕಾಲಿಗೆ ಕಚ್ಚಿ ಗಾಯಗೊಳಿಸಿರುವ ನಾಯಿ ರಸ್ತೆಯಲ್ಲಿ ಓಡಾಡುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಬೀದಿ ನಾಯಿ ದಾಳಿಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ

ಹಾವೇರಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಕುರಿತಂತೆ ನಗರಸಭೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿರು ಆರೋಪಿಸುತ್ತಿದ್ದಾರೆ. ಈಗಲಾದರೂ ನಗರಸಭೆ ಎಚ್ಚೆತ್ತು ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕಿದೆ ಎಂಬುದು ಸ್ಥಳೀಯರ ಮನವಿ.

For All Latest Updates

TAGGED:

ABOUT THE AUTHOR

...view details