ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ಚರ್ಮ ಎಮ್ಮೆ ಚರ್ಮಕ್ಕಿಂತ ದಪ್ಪ: ಸಿದ್ದರಾಮಯ್ಯ - siddaramaiah participated in rattihalli farmers protest

ರೈತನ ಕೆಲಸ ಮಾಡಿದವರು ಯಾರೂ ಪದೇ ಪದೆ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳುವುದಿಲ್ಲ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಟವಲ್ ಹಾಕಿಕೊಳ್ಳುತ್ತಾರೆ. ನಂತರ ತೆಗೆದು ಹಾಕುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

siddaramaiah
ಸಿದ್ದರಾಮಯ್ಯ

By

Published : Dec 11, 2020, 8:17 PM IST

Updated : Dec 11, 2020, 8:33 PM IST

ಹಾವೇರಿ: ರಾಜ್ಯ ಸರ್ಕಾರದ ಚರ್ಮ ಎಮ್ಮೆ ಚರ್ಮಕ್ಕಿಂತ ದಪ್ಪವಾಗಿದೆ. ಅದರ ಚರ್ಮ ಘೇಂಡಾಮೃಗದಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತನ ಕೆಲಸ ಮಾಡಿದವರು ಯಾರೂ ಪದೇ ಪದೆ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳುವುದಿಲ್ಲ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಟವಲ್ ಹಾಕಿಕೊಳ್ಳುತ್ತಾರೆ. ನಂತರ ತೆಗೆದು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇದನ್ನೂ ಓದಿ:ಭೂಸ್ವಾಧೀನಕ್ಕೆ ರಟ್ಟಿಹಳ್ಳಿಯಲ್ಲಿ ರೈತರ ವಿರೋಧ: ಪ್ರತಿಭಟನೆಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ

ಜನರಿಗೆ ಸ್ಪಂದಿಸದೆ ಇರುವ ಸರ್ಕಾರ ನಾಲಾಯಕ್ ಸರ್ಕಾರ. ಇಂತಹ ಸರ್ಕಾರವನ್ನು ನನ್ನ ಜನ್ಮದಲ್ಲಿ ನೋಡಿಲ್ಲಎಂದು ಹರಿಹಾಯ್ದ ಅವರು, ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್, ಉಡಗಣಿ ನೀರಾವರಿ ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು. ರೈತ ವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು. ಈ ಹೋರಾಟ ಕುರಿತಂತೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡುತ್ತೇನೆ. ಹೈಕೋರ್ಟ್ ಹಿರಿಯ ವಕೀಲ ಬಿ.ಡಿ.ಹಿರೇಮಠ ಅಮರಣಾಂತ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಹೋರಾಟಕ್ಕೆ ರೈತರು ಬೆಂಬಲಿಸಬೇಕು ಎಂದು ಕರೆ ನೀಡಿದರು.

Last Updated : Dec 11, 2020, 8:33 PM IST

For All Latest Updates

TAGGED:

ABOUT THE AUTHOR

...view details