ಕರ್ನಾಟಕ

karnataka

ETV Bharat / state

ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಲ್ಲ: ಕೆ ಎಸ್. ಈಶ್ವರಪ್ಪ ವಿಶ್ವಾಸ - ಗೃಹ ಸಚಿವ ಅಮಿತ್ ಶಾ

ಕೋಡಿಹಳ್ಳಿ ಶ್ರೀಗಳು ತಿಳಿಸಿದಂತೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ ಇನ್ನೂ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಈಶ್ವರಪ್ಪ ತಿಳಿಸಿದರು.

ಸಚಿವ ಕೆ.ಎಸ್. ಈಶ್ವರಪ್ಪ

By

Published : Sep 19, 2019, 9:09 PM IST

ಹಾವೇರಿ:ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಲ್ಲ. ಕೋಡಿಹಳ್ಳಿ ಸ್ವಾಮೀಜಿಯವರು ಈ ಕುರಿತಂತೆ ಹೇಳಿದ ಭವಿಷ್ಯವನ್ನು ನಾನು ಸ್ವಾಗತಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ

ಹಾವೇರಿಯಲ್ಲಿ ಮಾತನಾಡಿದ ಸಚಿವರು, ಶ್ರೀಗಳು ಹೇಳಿದಂತೆ ಚುನಾವಣೆ ನಡೆದರೆ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಸಿ.ಎಂ.ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಟೀಕೆ ಮಾಡಲಿ ಎಂದು ಈಶ್ವರಪ್ಪ ತಿಳಿಸಿದರು. ಸಿದ್ದರಾಮಯ್ಯಗೆ ನಾನು ಟೀಕೆ ಮಾಡಿದರೆ ತಡೆದುಕೊಳ್ಳಲು ಆಗುವುದಿಲ್ಲ. ಅವರು ನಮ್ಮ ಪ್ರಧಾನಿ, ಕೇಂದ್ರ ಗೃಹ ಸಚಿವರನ್ನು ಬಾಯಿಗೆ ಬಂದಂತೆ ಮಾತನಾಡುವುದನ್ನು ನನಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದರು.

ABOUT THE AUTHOR

...view details