ಹಾವೇರಿ:ಮಾಜಿ ಸಿ.ಎಂ.ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸುಮಾರು 500 ಕೋಟಿ ರೂ ಮೌಲ್ಯದ ಜಮೀನು ಕಬಳಿಸಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಕುರಿತಂತೆ 2014 ರಲ್ಲಿ ಲೋಕಾಯುಕ್ತ ತನಿಖೆಗೆ ಆದೇಶಿಸಿದರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡ ತಮ್ಮ ಪ್ರಭಾವದಿಂದ ಯಾವುದೇ ತನಿಖೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಕುಮಾರಸ್ವಾಮಿ, ಅವರ ಕುಟುಂಬದ ಮೇಲೆ ಎಸ್ಆರ್ ಹಿರೇಮಠ ಗಂಭೀರ ಆರೋಪ ಲೋಕಾಯುಕ್ತರು ಅದೇಶ ಮಾಡಿ ಐದು ವರ್ಷವಾದರೂ ಯಾವುದೇ ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ. ಈ ಕುರಿತಂತೆ ಇದೇ 14 ರಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 2014 ರ ಲೋಕಾಯುಕ್ತ ಪ್ರಕರಣವನ್ನು ಮೂರು ತಿಂಗಳೊಳಗೆ ಅನುಷ್ಠಾನಗೊಳಿಸುವಂತೆ ಹೈಕೋರ್ಟ್ ಅದೇಶಿಸಿದೆ ಎಂದು ಹಿರೇಮಠ ತಿಳಿಸಿದರು.
ಈ ಕುರಿತಂತೆ ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಹಿರೇಮಠ ಒತ್ತಾಯಿಸಿದ್ದಾರೆ. ಬಳ್ಳಾರಿಯಲ್ಲಿ ಸಮಾಜ ಪರಿವರ್ತನ ಸಮುದಾಯ ಯಾವ ರೀತಿ ಹೋರಾಟ ನಡೆಸಿತ್ತೋ ಆದೇ ರೀತಿ ರಾಮನಗರದಲ್ಲಿಯೂ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಆದಾಗ್ಯೂ ದೇವೇಗೌಡ ಮತ್ತು ಅವರ ಕುಟುಂಬ ಈ ಕೂಡಲೇ ಕಬಳಿಸಿರುವ ಜಮೀನನ್ನು ವಾಪಸ್ ಮಾಡಬೇಕು ಎಂದು ಹಿರೇಮಠ ಒತ್ತಾಯಿಸಿದರು.