ರಾಣೆಬೆನ್ನೂರು:ಲೋಕಕಲ್ಯಾಣಾರ್ಥ ಮತ್ತು ಮಹಾಮಾರಿ ಕೊರೊನಾ ನಿರ್ಮೂಲನೆಗಾಗಿ ರಾಣೆಬೆನ್ನೂರಿನ ಹಿರೇಮಠದ ಶನೈಶ್ಚರ ಮಂದಿರದಲ್ಲಿ 384 ದಿನಗಳ ಕಾಲ ಮಹಾಮೃತ್ಯುಂಜಯ ಜಪ, ಯಾಗ, ದುರ್ಗಾ ಜಪ, ಹವನ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಡೆಯಲಿವೆ.
ನ.11 ರಂದು ಬೆಳಿಗ್ಗೆ 4.30 ಕ್ಕೆ ಉಜ್ಜಯನಿ ಸಿದ್ದಲಿಂಗ ಜಗದ್ಗುರುಗಳ ಕತೃ ಗದ್ದುಗೆಯಿಂದ ನಂದಾದೀಪ ತರುವುದು. ನಂತರ ಕುದರಿಹಾಳ ಗ್ರಾಮದ ತುಂಗಭದ್ರಾ ನದಿಯ ತಟೆಯಲ್ಲಿ ಗಂಗಾಪೂಜೆ ನೆರವೇರಿಸಿ ಪಾದಯಾತ್ರೆಯೊಂದಿಗೆ ಶ್ರೀಮಠಕ್ಕೆ ಆಗಮಿಸಿ ಪೂರ್ಣಕುಂಭೋತ್ಸವ ಸಂಪನ್ನಗೊಳ್ಳುವುದು.
ಸಂಜೆ 5.30ರಿಂದ ಮಂಟಪ ಪ್ರವೇಶ, ಗಣಪತಿ, ಸ್ವಸ್ತಿಪುಣ್ಯಾಹ, ಪಂಚಗವ್ಯ ಪ್ರಾಶನ ಪೂಜೆಗಳು ನಡೆಯುತ್ತವೆ. ನ. 12ರಂದು ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಮಹಾಮೃತ್ಯುಂಜಯ ಮತ್ತು ದುರ್ಗಾ ಮೃಣ್ಮಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಆಗಮ ಶಾಸ್ತ್ರಾನುಸಾರ ಪೂಜೆಗಳು ಪ್ರಾರಂಭಗೊಳ್ಳುವವು. ಸಂಜೆ 6 ಕ್ಕೆ ಸಿದ್ದಾಂತ ಶಿಖಾಮಣಿ ಪ್ರವಚನ ಉದ್ಘಾಟನೆ ಸಮಾರಂಭ 7.30 ಕ್ಕೆ ನಂದಾದೀಪ ಪ್ರಜ್ವಲನಗೊಳ್ಳುವುದು.
ನ. 13ರಂದು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮಹಾಮೃತ್ಯುಂಜಯ ಮಂತ್ರ, ಶ್ರೀ ದುರ್ಗಾ ಮಂತ್ರ, ನವಾರ್ಣ ಮಂತ್ರ, ಶನೈಶ್ಚರ ಮಂತ್ರ, ಶಿವ ಪಂಚಾಕ್ಷರಿ ಮಂತ್ರ ಜಪಗಳು ಜರುಗಲಿದೆ.