ಕರ್ನಾಟಕ

karnataka

ETV Bharat / state

ಡಿಕೆ ಶಿವಕುಮಾರ್ ಕೋವಿಡ್​ನಿಂದ ಗುಣಮುಖವಾಗಲು ವಿಶೇಷ ಪೂಜೆ - KPCC president dks

ಹಾವೇರಿ ಜಿಲ್ಲೆ ಹಾನಗಲ್​ ತಾಲೂಕಿನ ಹೀರೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್​ ಕೊರೊನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಪೂಜೆ ಸಲ್ಲಿಸಲಾಯಿತು.

special worship in haveri
ಡಿಕೆಶಿ ಗುಣಮುಖವಾಗಲು ವಿಶೇಷ ಪೂಜೆ

By

Published : Aug 26, 2020, 8:41 PM IST

ಹಾನಗಲ್: ಕೆ‌ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬೇಗ ಗುಣಮುಖರಾಗಲಿ ಎಂದು ಹಾನಗಲ್ ತಾಲೂಕಿನ ಹೀರೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ನೆರವೇರಿಸಿದರು.

ಡಿಕೆಶಿ ಗುಣಮುಖವಾಗಲು ವಿಶೇಷ ಪೂಜೆ

ಕಳೆದ ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತರು ಪೂಜೆ ಸಲ್ಲಿಕೆ ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ನಮ್ಮೆಲ್ಲರ ಭರವಸೆಯ ಸಂಕೇತ ಮತ್ತು ಅಪಾರ ಜನತೆಯ ಪ್ರೀತಿಗೆ ಪಾತ್ರರಾದ ಡಿಕೆಶಿ ಕೊರೊನಾ ಪಾಸಿಟಿವ್ ಆಗಿರುವುದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಬೇಗ ಗುಣಮುಖರಾಗಲಿ ಎಂದು ಆಶಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಗಿರಗಪ್ಪನವರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ತಹಶೀಲ್ದಾರ್​, ವಿರೇಶ ಬೈಲವಾಳ, ಉಮೇಶ ದಾನಪ್ಪನವರ, ಮೈಲಾರಪ್ಪ ಕಬ್ಬೂರ, ಸುರೇಶ ದೊಡ್ಡಕುರುಬರ, ಬಸವರಾಜ ತರವಂದ, ಸುರೇಶ ಗೊಲ್ಲರ, ಹನುಮಂತಪ್ಪ ಕ್ವಾಟೇರ, ಮಂಜು ಬಾರ್ಕಿ, ಚನ್ನಬಸನಗೌಡ ಪಾಟೀಲ, ನಿಂಗರಾಜ ಬೈಚವಳ್ಳಿ ಇದ್ದರು.

ABOUT THE AUTHOR

...view details