ಕರ್ನಾಟಕ

karnataka

ETV Bharat / state

ಹರಿಹರ-ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚಾರ: 60 ಸಿಬ್ಬಂದಿಗೆ ನಿತ್ಯ ಖರ್ಚೆಷ್ಟು?

ರೈಲ್ವೆ ಇಲಾಖೆಯಲ್ಲಿ ಗೂಡ್ಸ್ ಗಾಡಿಗಳಿಗಾಗಿ ಕೆಲಸ ನಿರ್ವಹಿಸುವ ಸಿಬ್ಬಂದಿಗಾಗಿ ಹರಿಹರ-ಹುಬ್ಬಳ್ಳಿ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ.

train
ರೈಲು

By

Published : Apr 9, 2020, 4:08 PM IST

ಹಾವೇರಿ : ಇಡೀ ದೇಶವೇ ಲಾಕ್​ಡೌನ್​ ಆಗಿ ಬಸ್​, ರೈಲು ಸಂಚಾರಹಾಗೂ ವಿಮಾನ ಹಾರಾಟವೂ ರದ್ದಾಗಿದೆ. ಆದರೆ, ಹುಬ್ಬಳ್ಳಿ ಮತ್ತು ಹರಿಹರದ ನಡುವೆ ಮಾತ್ರ 4 ಬೋಗಿಯ ವಿಶೇಷ ರೈಲು ಚಲಿಸುತ್ತಿದೆ.

ಹರಿಹರ-ಹುಬ್ಬಳ್ಳಿ ನಡುವೆ ವಿಶೇಷ ರೈಲು ಸಂಚಾರ

ಲಾಕ್​ಡೌನ್​ನಿಂದ ಬಹುತೇಕ ಇಲಾಖೆಗಳಿಗೆ ರಜೆ ಘೋಷಿಸಲಾಗಿದೆ. ಆದ್ರೆ, ರೈಲ್ವೆ ಇಲಾಖೆಯಲ್ಲಿ ಸರಕು ಸಾಗಣೆ ಮಾಡುವ ಗೂಡ್ಸ್ ಗಾಡಿಗಳಿಗಾಗಿ ಸಿಬ್ಬಂದಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಈ ರೀತಿ ಕರ್ತವ್ಯ ನಿಭಾಯಿಸಲು ಹರಿಹರದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಹರಿಹರಕ್ಕೆ ನಿತ್ಯ 60 ನೌಕರರು ಸಂಚರಿಸುತ್ತಿದ್ದಾರೆ. ಈ ನೌಕರರಿಗಾಗಿ ನೈರುತ್ಯ ರೈಲ್ವೆ ವಿಶೇಷ ಟ್ರೈನ್ ಬಿಟ್ಟಿದೆ.

ಮುಂಜಾನೆ 6:30ಕ್ಕೆ ಹುಬ್ಬಳ್ಳಿ ಬಿಡುವ ಈ ರೈಲು ಕುಂದಗೋಳ, ಕಳಸ, ಸಂಶಿ, ಗುಡಗೇರಿ, ಯಲವಗಿ, ಸವಣೂರು, ಕಳಸೂರು, ಕರ್ಜಗಿ, ಹಾವೇರಿ, ಬ್ಯಾಡಗಿ, ದೇವರಗುಡ್ಡ, ರಾಣೆಬೆನ್ನೂರು, ಚಳಗೇರಿ ಮತ್ತು ಹರಿಹರ ತಲಪುತ್ತದೆ. ಹರಿಹರದಿಂದ ಹುಬ್ಬಳ್ಳಿಗೆ ಈ ವಿಶೇಷ ಟ್ರೈನು ಸಂಚರಿಸಲು ದಿನನಿತ್ಯ 1 ಲಕ್ಷ 40 ಸಾವಿರ ರೂಪಾಯಿ ಖರ್ಚಾಗುತ್ತಿದೆ.

ಸ್ಟೇಷನ್ ಮಾಸ್ಟರ್, ಪಾಯಿಂಟ್ಸ್‌ಮನ್, ಎಂಜನಿಯರ್ ಮತ್ತು ಗ್ಯಾಂಗ್‌ಮನ್‌ಗಳು ಸಂಚರಿಸುತ್ತಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಿಂದ ತುಮಕೂರಿನ ಸಂಪಿಗೆಯವರೆಗೆ ವಿಶೇಷ ರೈಲು ಆರಂಭಿಸಲಾಯಿತು. ಆ ನಂತರ ಹುಬ್ಬಳ್ಳಿ ಮತ್ತು ಹರಿಹರದ ನಡುವೆ ಪ್ರಾರಂಭಿಸಲಾಗಿದೆ.

ABOUT THE AUTHOR

...view details