ಕರ್ನಾಟಕ

karnataka

ETV Bharat / state

ಪ್ರಧಾನಿ ಘೋಷಿಸಿರುವ ವಿಶೇಷ​ ಪ್ಯಾಕೇಜ್​ ಸ್ವಾಗತಾರ್ಹ: ಸಿ.ಎಂ.ಉದಾಸಿ - Corona News

ಕೊರೊನಾ ಹೊಡೆತದಿಂದ ನಲುಗಿದ ದೇಶದ ಆರ್ಥಿಕತೆಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂಪಾಯಿ ನೀಡುತ್ತಿರುವ ಯೋಜನೆ ಸ್ವಾಗತಾರ್ಹ ಎಂದು ಹಾನಗಲ್ ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

Special package announced by Narendra Modi is much needed
ಮೋದಿಯವರು ಘೋಷಿಸಿರುವ ಸ್ಪೆಷಲ್​ ಪ್ಯಾಕೇಜ್​ ಸ್ವಾಗತಾರ್ಹ: ಹಾನಗಲ್ ಶಾಸಕ

By

Published : May 14, 2020, 12:41 PM IST

ಹಾನಗಲ್(ಹಾವೇರಿ): ದೇಶದ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ ನೀಡುತ್ತಿರುವ ಯೋಜನೆ ಸ್ವಾಗತಾರ್ಹ ಎಂದು ಹಾನಗಲ್ ಶಾಸಕ ಸಿ.ಎಂ.ಉದಾಸಿ ಅಭಿಮತ ವ್ಯಕ್ತಪಡಿಸಿದರು.

ಕೊರೊನಾದಿಂದ ಜಗತ್ತು ದಿಗ್ಭ್ರಮೆಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರದ ಈ ನಿರ್ಧಾರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ದೇಶದ ಸಣ್ಣ ಕೈಗಾರಿಕೆಗಳು, ಉದ್ಯಮಗಳಿಗೆ ಪುನರ್‌ಜನ್ಮ ನೀಡಿದಂತಾಗುತ್ತದೆ. ದೇಶದ ಜನತೆ ಸ್ವಾಲಂಬಿಗಳಾಗಬೇಕು ಎಂಬುದು ಅವರ ಮಹದಾಸೆಯಾಗಿದೆ ಎಂದರು.

ಕೋವಿಡ್​-19 ಅನ್ನು ದೇಶದಿಂದ ನಿರ್ಮೂಲನೆ ಮಾಡಲು ನಾವೆಲ್ಲಾ ಒಮ್ಮತದಿಂದ ಸಹಕರಿಸಬೇಕು. ದೇಶ, ರಾಜ್ಯ ಸರ್ಕಾರಗಳ ಆದೇಶ ಪಾಲಿಸುತ್ತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಾ ಬದುಕಬೇಕು ಎಂದು ಸಲಹೆ ಕೊಟ್ಟರು.

ABOUT THE AUTHOR

...view details