ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿ ಹಾನಗಲ್​​ ಸೋಯಾಬಿನ್ ಬೆಳೆಗಾರರು - ಹಾನಗಲ್​

ಹಾನಗಲ್ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ರೈತರು ಬೆಳೆದ ಸೋಯಾಬಿನ್ ಬೆಳೆ ಇನ್ನೇನು ಫಸಲು ಕಿತ್ತು ಬಣವೆ ಹಾಕಬೇಕು ಎನ್ನುವಷ್ಟರಲ್ಲೆ ಹಾಳಾಗಿದೆ.

Soybean crop is ravaged by rain
ಸಂಕಷ್ಟದಲ್ಲಿ ಹಾನಗಲ್​​ ಸೋಯಾಬಿನ್ ಬೆಳೆಗಾರರು

By

Published : Sep 11, 2020, 8:36 PM IST

ಹಾನಗಲ್ :ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ರೈತರು ಬೆಳೆದ ಸೋಯಾಬಿನ್ ಬೆಳೆ ಇನ್ನೇನು ಫಸಲು ಕಿತ್ತು ಬಣವೆ ಹಾಕಬೇಕು ಎನ್ನುವಷ್ಟರಲ್ಲೆ ಹಾಳಾಗಿದೆ.

ಸಂಕಷ್ಟದಲ್ಲಿ ಹಾನಗಲ್​​ ಸೋಯಾಬಿನ್ ಬೆಳೆಗಾರರು

ಹೊಲದಲ್ಲಿನ ಸೋಯುಬಿನ್ ಪೈರು ಸಂಪೂರ್ಣ ನೆಲಕಚ್ಚುತ್ತಿದೆ. ಇದೀಗ ಸೋಯಾಬಿನ್ ಬೆಳೆಗಾರರ ಬದುಕು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನಾದರು ವರುಣ ದೇವ ಸ್ವಲ್ಪ ವಿರಾಮಿಸಿ ಸಹಕರಿಸುತ್ತಾನ ಎಂಬುದ ರೈತರ ಅಳಲಾಗಿದೆ.

ತಾಲೂಕಿನಾದ್ಯಂತ ಅತೀ ಹೆಚ್ಚು ರೈತರು ಸೋಯಾಬಿನ್ ಬೆಳೆಯನ್ನ ಅವಲಂಬಿಸಿದ್ದು ಇದೀಗ ವರುಣನ ಅವಕೃಫೆಯಿಂದ ಕಣ್ಣಿರಿನಲ್ಲಿ ಕೈ ತೊಳೆಯುವಂತೆ ಆಗಿದೆ.

ABOUT THE AUTHOR

...view details