ಹಾವೇರಿ: ಯುಗಾದಿ ಹಬ್ಬದ ದಿನದಂದೇ ಮಗ ತಂದೆಯನ್ನ ಹತ್ಯಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯುಗಾದಿ ಹಬ್ಬದ ದಿನದಂದೇ ತಂದೆಯನ್ನು ಕೊಂದ ಮಗ - kannada news
ತಂದೆ ಮಗನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
![ಯುಗಾದಿ ಹಬ್ಬದ ದಿನದಂದೇ ತಂದೆಯನ್ನು ಕೊಂದ ಮಗ](https://etvbharatimages.akamaized.net/etvbharat/images/768-512-2928318-thumbnail-3x2-kill.jpg)
ಯುಗಾದಿ ಹಬ್ಬದ ದಿನದಂದೆ ತಂದೆಯನ್ನು ಕೊಂದ ಮಗ
ಹಾನಗಲ್ ತಾಲೂಕಿನ ಬಿಂಗಾಪುರದಲ್ಲಿ ಈ ಘಟನೆ ನಡೆದಿದೆ, ತಂದೆ ಮಗನ ನಡುವಿನ ವೈಮನಸ್ಸೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಯುಗಾದಿ ದಿನವಾದ ಶನಿವಾರ (ತಂದೆ ) ಮುರಳಿ ಮತ್ತು (ಮಗ) ಸಿದ್ದಪ್ಪ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಅರೋಪಿ ಸಿದ್ದಪ್ಪ ತಂದೆಯನ್ನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.