ಕರ್ನಾಟಕ

karnataka

ETV Bharat / state

ಉಕ್ರೇನ್​​ನಿಂದ ನವೀನ್​ ಪಾರ್ಥಿವ ಶರೀರ ತರುವುದು ಸರ್ಕಾರದ ಕರ್ತವ್ಯ: ಸಲೀಂ ಅಹ್ಮದ್

ಪೋಷಕರ ಪ್ರಮುಖ ಬೇಡಿಕೆ ನವೀನ್​ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಬೇಕು ಎನ್ನುವುದಾಗಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್ ಸಿಲುಕಿರುವ ಭಾರತೀಯರನ್ನ ದೇಶಕ್ಕೆ ಕರೆತರುವ ಕೆಲಸವಾಗಬೇಕು ಎಂದು ಸಲೀಂ ಅಹ್ಮದ್ ಹೇಳಿದರು.

sirigere sri and Saleem ahamad visited to Naveen house who death in Ukraine
ನವೀನನ ಪಾರ್ಥಿವ ಶರೀರವನ್ನು ತರಿಸುವುದ ಸರ್ಕಾರದ ಕರ್ತವ್ಯ: ಸಲೀಂ ಅಹ್ಮದ್

By

Published : Mar 6, 2022, 11:06 PM IST

ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​ನ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭೇಟಿ ನೀಡಿದರು.

ನವೀನ್​​ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಲೀಂ ಅಹ್ಮದ್, ಆತನ ತಂದೆ-ತಾಯಿ ಅಣ್ಣನಿಗೆ ಸಾಂತ್ವನ ಹೇಳಿದರು. ಅಲ್ಲದೆ,​ ಕುಟುಂಬಕ್ಕೆ ವೈಯಕ್ತಿಕವಾಗಿ ಸಲೀಂ ಅಹ್ಮದ್​ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವು ಆದಷ್ಟು ಬೇಗ ನವೀನ್ ಪಾರ್ಥೀವ ಶರೀರವನ್ನು ತರಬೇಕು ಎಂದು ಆಗ್ರಹಿಸಿದರು.

ನವೀನ್​ ಪಾರ್ಥಿವ ಶರೀರವನ್ನು ತರಿಸುವುದು ಸರ್ಕಾರದ ಕರ್ತವ್ಯ: ಸಲೀಂ ಅಹ್ಮದ್

ಪೋಷಕರ ಪ್ರಮುಖ ಬೇಡಿಕೆ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಬೇಕು ಎನ್ನುವುದಾಗಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ಕೆಲಸವಾಗಬೇಕು. ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ನವೀನ್ ಸಾವು ರಾಜ್ಯಕ್ಕೆ ಒಂದು ಸಂದೇಶ ಕೊಟ್ಟಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.

ಸಿರಿಗೆರೆ ಶ್ರೀಗಳ ಭೇಟಿ: ನವೀನ್​ ಮನೆಗೆ ಸಿರಿಗೆರೆ ಶ್ರೀಗಳು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ, ನವೀನ್​​ ಸಹೋದರ ಹರ್ಷನಿಗೆ ಧೈರ್ಯ ತುಂಬಿದರು.

ನವೀನ್​ ಮನೆಗೆ ಸಿರಿಗೆರೆ ಶ್ರೀಗಳ ಭೇಟಿ

ಬ್ಯಾಡಗಿಯ ಕುಶಾಲ ಸಂಕಣ್ಣನವರ್, ಚಳಗೇರಿ ಗ್ರಾಮದ ಅಮೀತ್ ಮತ್ತು ಸುಮನ್​ಗೆ ಕರೆ ಮಾಡಿ ಮಾತನಾಡಿ, ಆದಷ್ಟು ಭೇಗ ನೀವು ಭಾರತಕ್ಕೆ ಮರಳಲಿದ್ದೀರಿ ಎಂದು ಸಿರಿಗೆರೆ ಶ್ರೀಗಳು ಧೈರ್ಯ ಹೇಳಿದರು.

ಇದನ್ನೂ ಓದಿ:ಉಕ್ರೇನ್​ನಿಂದ ಸುರಕ್ಷಿತವಾಗಿ ಬಂದಿಳಿದ ಕೊಡಗಿನ ಕುವರಿ ಅಕ್ಷಿತಾ

For All Latest Updates

TAGGED:

ABOUT THE AUTHOR

...view details