ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀಗಳ ನಿಧನಕ್ಕೆ ಸಿದ್ದರಾಮಯ್ಯ, ಜಮೀರ್ ಅಹ್ಮದ್​ ಸಂತಾಪ ​ - ಹಾವೇರಿ ಜಮೀರ್​ ಹೇಳಿಕೆ

ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್​ ಅಹ್ಮದ್​ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಶ್ರೀಗಳು ಸಾಮಾಜಿಕ ಬದಲಾವಣೆ ಜೊತೆಗೆ ಇಫ್ತಾರ್​ ಕೂಟ ಆಯೋಜಿಸುವ ಮೂಲಕ ಧಾರ್ಮಿಕ ಭಾವೈಕ್ಯತೆ ಮೆರೆದಿದ್ದರು ಎಂದು ಸ್ಮರಿಸಿದ್ದಾರೆ.

siddaramayya and zamir
ಸಂತಾಪ ಸೂಚಿದ ಸಿದ್ದರಾಮಯ್ಯ, ಜಮೀರ್​

By

Published : Dec 29, 2019, 2:30 PM IST

ಬೆಂಗಳೂರು/ಹಾವೇರಿ: ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್​ ಅಹ್ಮದ್​ ತೀವ್ರ ಸಂತಾಪ ಸೂಚಿಸಿದ್ದಾರೆ.

ಶ್ರೀಗಳು ಧಾರ್ಮಿಕ ಕಾರ್ಯಗಳ ಜೊತೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡವರು. ಕೊನೆಯವರೆಗೂ ಸಕ್ರಿಯವಾಗಿ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜದ ಬದಲಾವಣೆಗೆ ಶ್ರೀಗಳು ಪ್ರಯತ್ನಪಟ್ಟವರು. ಮೈಸೂರಿನ ಕೈಲಾಸಪುರಿ ಸೇರಿ ಹಲವು ಕಡೆಯ ದಲಿತ ಕೇರಿಗಳಿಗೆ ಹೋಗಿದ್ದವರು. ರಂಜಾನ್ ವೇಳೆ ಇಫ್ತಾರ್ ಕೂಟ ಆಯೋಜಿಸಿ ಭಾವೈಕ್ಯತೆ ಮೆರೆದಿದ್ದರು. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು.

ಸಂತಾಪ ಸೂಚಿದ ಸಿದ್ದರಾಮಯ್ಯ, ಜಮೀರ್​

ಉಡುಪಿ ಮಠಕ್ಕೆ ನಾನು ಹೋಗುವ ಸಂದರ್ಭ ಬರಲಿಲ್ಲ, ನಮ್ಮ ಮತ್ತು ಅವರ ನಡುವೆ ರಾಜಕೀಯ ಭಿನ್ನಾಭಿಪ್ರಾಯವಿತ್ತು. ಆದರೆ ವೈಚಾರಿಕ, ಧಾರ್ಮಿಕ ಬಿನ್ನಾಭಿಪ್ರಾಯ ಇರಲಿಲ್ಲ. ನಾನು ಕೃಷ್ಣ ಮಠಕ್ಕೆ ಹೋಗಿಲ್ಲ ಅಂತಲ್ಲ, ಹೋಗುವ ಸಂದರ್ಭ ಬರಲಿಲ್ಲ ಎಂದು ಅಗಲಿದ ಯತಿಗಳು ಹಾಗೂ ಇವರ ನಡುವೆ ಇದ್ದ ಭಿನ್ನಾಭಿಪ್ರಾಯದ ಬಗ್ಗೆ ಸ್ಪಷ್ಟಪಡಿಸಿದರು.

ಶ್ರೀಗಳ ನಿಧನ ಸಂಬಂಧ ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಮೀರ್​ ಅಹ್ಮದ್​​ ಅವರು ಶ್ರೀಗಳ ನಿಧನದ ವಿಷಯ ತಿಳಿಯುತ್ತಿದ್ದಂತೆ ಶಾಕ್ ಆಯಿತು. ಸ್ವಾಮಿಗಳು ಇಷ್ಟು ಬೇಗ ನಮ್ಮನ್ನ ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಒಂದು ವಾರದ ಹಿಂದೆ ನಾನು ಮತ್ತು ಎಂ.ಬಿ ಪಾಟೀಲ್ ಉಡುಪಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆವು. ನನ್ನ ಕ್ಷೇತ್ರದ ರಾಘವೇಂದ್ರ ಮಠಕ್ಕೆ ಪ್ರತಿ ವರ್ಷ ಅವರು ಆಗಮಿಸುತ್ತಿದ್ದರು, ಬಂದಾಗಲೆಲ್ಲಾ ನನ್ನನ್ನು ಕರೆಸುತ್ತಿದ್ದರು. ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದರು. ಮಠದಲ್ಲಿಯೇ ಇಫ್ತಾರ್ ಕೂಟ ಏರ್ಪಡಿಸಿದ್ದಲ್ಲದೆ ನಮಾಜ್ ಮಾಡಲು ಅವಕಾಶ ಕಲ್ಪಿಸಿದ್ದನ್ನ ಜಮೀರ್ ನೆನಪಿಸಿಕೊಂಡರು.

ಭಗವಂತನು ಸ್ವಾಮೀಜಿಯ ಅಭಿಮಾನಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಜಮೀರ್ ಕಂಬನಿ ಮಿಡಿದರು.

ABOUT THE AUTHOR

...view details