ಹಾವೇರಿ: ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನವೀನ್ ಕುಟುಂಬಸ್ಥರಿಗೆ ಮುತಾಲಿಕ್ ಸಾಂತ್ವನ: ಸಹೋದರಿನಿಗೆ ಉದ್ಯೋಗ ನೀಡಲು ಆಗ್ರಹ - ಮೃತ ನವೀನ್ ಕುಟುಂಬಸ್ಥರಿಗೆ ಮುತಾಲಿಕ್ ಸಾಂತ್ವನ
ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿಯ ನವೀನ್ ಕುಟುಂಬಸ್ಥರಿಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸಾಂತ್ವನ ಹೇಳಿ, ಆದಷ್ಟು ಬೇಗ ಯುವಕನ ಮೃತದೇಹವನ್ನು ಕರೆತರುವ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದೊಂದು ವಾರದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಬೇರೆ ದೇಶಗಳ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ಬಹಳ ದುಃಖದ ವಿಷಯ. ನವೀನ್ ಪ್ರತಿಭಾವಂತ ಯುವಕ. ಆತನ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡಬೇಕು. ಇನ್ನೊಂದು ವರ್ಷದ ನಂತರ ಯುವಕ ಕುಟುಂಬಕ್ಕೆ ಆಧಾರ ಆಗ್ತಿದ್ದ. ಸದ್ಯ ನವೀನ್ ಸಹೋದರ ಪಿಎಚ್ಡಿ ಮಾಡುತ್ತಿದ್ದು, ಆತನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕೊಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು; ಮೃತ ನವೀನ್ ತಾಯಿ ವಿಜಯಲಕ್ಷ್ಮಿ ಬೇಸರ