ಕರ್ನಾಟಕ

karnataka

ETV Bharat / state

ಹಾವೇರಿ: ತುಕ್ಕು ಹಿಡಿದು ಮೂಲೆ ಗುಂಪಾಯ್ತು 'ಶ್ರದ್ಧಾಂಜಲಿ ವಾಹನ' - ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಾಹನ

ಇದೀಗ ಜಿಲ್ಲಾಸ್ಪತ್ರೆಯಿಂದ ಮೃತದೇಹಗಳನ್ನು ಗ್ರಾಮಕ್ಕೆ ಮರಳಿ ತೆಗೆದುಕೊಂಡು ಹೋಗುವುದೇ ದುಸ್ತರವಾಗಿದೆ. ಶ್ರದ್ದಾಂಜಲಿ ವಾಹನ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಬಡವರು ಆಶ್ರಯಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

shraddanjali-vehicle
ಶ್ರದ್ಧಾಂಜಲಿ ವಾಹನ

By

Published : Nov 10, 2021, 6:56 PM IST

ಹಾವೇರಿ:ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ದೇಹಗಳನ್ನು ಮರಳಿ ಕೊಂಡೊಯ್ಯಲು ಬಳಸುತ್ತಿದ್ದ ಶ್ರದ್ದಾಂಜಲಿ ವಾಹನ (Shraddanjali vehicle) ಮೂಲೆಗುಂಪಾಗಿದೆ.

ಇದೀಗ ಜಿಲ್ಲಾಸ್ಪತ್ರೆಯಿಂದ ಮೃತದೇಹಗಳನ್ನು ಗ್ರಾಮಕ್ಕೆ ಮರಳಿ ತೆಗೆದುಕೊಂಡು ಹೋಗುವುದೇ ದುಸ್ತರವಾಗಿದೆ. ಶ್ರದ್ದಾಂಜಲಿ ವಾಹನ ಇಲ್ಲದ ಕಾರಣ ಖಾಸಗಿ ವಾಹನಗಳಿಗೆ ಬಡವರು ಆಶ್ರಯಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.


ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನಗಳ ಮಾಲೀಕರು ಬಾಯಿಗೆ ಬಂದ ದರ ಕೇಳುತ್ತಿದ್ದಾರೆ. ಬಡವರು ಸಾಲ ಮಾಡಿ ಶವ ತೆಗೆದುಕೊಂಡು ಹೋಗುವ ಸ್ಥಿತಿ ಇಲ್ಲಿದೆ.

ಬಡವರ ಅನುಕೂಲಕ್ಕೆ ಬರುತ್ತಿದ್ದ ಈ ವಾಹನದ ಭಾಗಗಳು ತುಕ್ಕುಹಿಡಿದು ಕಳಚಿ ಬೀಳುತ್ತಿವೆ. ಈ ಕುರಿತಂತೆ ವೈದ್ಯಾಧಿಕಾರಿಗಳಿಗೆ, ಹಾವೇರಿ ಡಿಹೆಚ್ಓಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ:ಇಟಗಿ ದೇವಸ್ಥಾನದ ಮುಂದಿರುವ ಕಲ್ಲಿನಲ್ಲಿ ಹೊರಹೊಮ್ಮುತ್ತಿದೆ ಸಂಗೀತ: ವಿಡಿಯೋ ವೈರಲ್​​

ABOUT THE AUTHOR

...view details