ಹಾವೇರಿ:ಗುಟ್ಕಾ ಹಾಕಿಕೊಂಡು ಹೋಗುತ್ತೇವೆ ಅಂತಾ ಪ್ರೇಕ್ಷಕರು ಗಲಾಟೆ ಮಾಡಿದ್ದು ನೋಡಿದ್ದೆ. ಸಿಗರೇಟ್ ತಗೆದುಕೊಂಡು ಹೋಗಿ ಚಿತ್ರಮಂದಿರದಲ್ಲಿ ಸೇದುತ್ತೇವೆ ಎಂದು ಗಲಾಟೆ ಮಾಡಿದ್ದನ್ನು ನೋಡಿದ್ದೇನೆ. ಅಷ್ಟೆ ಯಾಕೆ ಕೆಲವೊಮ್ಮೆ ಕುಡಿದು ಗಲಾಟೆ ಮಾಡಿದವರನ್ನೂ ನೋಡಿದ್ದೇನೆ. ಆದರೆ ಈ ರೀತಿ ಚಿತ್ರಮಂದಿರದಲ್ಲಿ ಮನರಂಜನೆಗೆ ಬಂದವರು ಶೂಟೌಟ್ ಮಾಡಿದ್ದನ್ನ ನಾನು ಯಾವತ್ತು ನೋಡಿಲ್ಲ ಎಂದು ರಾಜಶ್ರೀ ಚಿತ್ರಮಂದಿರದ ಮಾಲೀಕ ವಿಕ್ರಮ ದೇಸಾಯಿ ಹೇಳಿದರು.
ಹಾವೇರಿ ಶೂಟೌಟ್ ಪ್ರಕರಣ: ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಶೋಧ ಘಟನೆಯಲ್ಲಿ ಮುಗಳಿ ಗ್ರಾಮದ ವಸಂತಕುಮಾರ್ ಶಿವಪುರ(27) ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರಮಂದಿರವನ್ನು ಪೊಲೀಸರು ಸುಪರ್ದಿಗೆ ತೆಗೆದು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನ ರದ್ದು ಮಾಡಲಾಗಿದೆ.
ಇದನ್ನೂ ಓದಿ:ಶಿಗ್ಗಾವಿಯಲ್ಲಿ ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಗುಂಡು ಹಾರಿಸಿದ ದುಷ್ಕರ್ಮಿ.. ಓರ್ವನಿಗೆ ಗಾಯ
ವಸಂತಕುಮಾರ್ ಮಂಗಳವಾರ ಜಮೀನಿನ ಕೆಲಸ ಮುಗಿಸಿಕೊಂಡು ತನ್ನ ನಾಲ್ಕು ಸ್ನೇಹಿತರ ಜೊತೆ ಕೆಜಿಎಫ್ ಚಿತ್ರ ನೋಡಲು ಹೋಗಿದ್ದ. ಅಲ್ಲಿಅವನ ಮೇಲೆ ಶೂಟೌಟ್ ಆಗಿ ಗಾಯಗೊಂಡಿದ್ದಾನೆ. ಕುಟುಂಬದ ಸದಸ್ಯರು ತೀವ್ರ ಆತಂಕಕೊಂಡಿದ್ದಾರೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ದೇಹದಲ್ಲಿ ಮೂರು ಗುಂಡುಗಳು ಇದ್ದು, ಹೊಟ್ಟೆ ಮತ್ತು ತೊಡೆಯಲ್ಲಿ ಗಾಯವಾಗಿದೆ. ಆತನನ್ನ ನೋಡಿಕೊಳ್ಳಲು ಮನೆಯ ಸದಸ್ಯರು ಆಸ್ಪತ್ರೆಯಲ್ಲಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಸಂತಕುಮಾರ್ ಮಾವ ಮಹಾದೇವಪ್ಪ ತಿಳಿಸಿದರು.
ಆರೋಪಿ ಪತ್ತೆಗೆ ಪೊಲೀಸ್ ಇಲಾಖೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದು ಆದಷ್ಟು ಬೇಗ ಆರೋಪಿ ಬಂಧಿಸುವದಾಗಿ ಹಾವೇರಿ
ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಇದನ್ನೂ ಓದಿ:ಶಿಗ್ಗಾಂವಿ ಚಿತ್ರಮಂದಿರದಲ್ಲಿ ಶೂಟೌಟ್ ಪ್ರಕರಣ : ಸಿನಿಮಾ ಪ್ರದರ್ಶನ ಬಂದ್, ಪೊಲೀಸ್ ಭದ್ರತೆ