ಕರ್ನಾಟಕ

karnataka

ETV Bharat / state

ಹಾನಗಲ್ ಬೈಎಲೆಕ್ಷನ್: ಇಂದು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ನಾಮಪತ್ರ - ನಾಮಪತ್ರ ಸಲ್ಲಿಕೆ

ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.

shivaraj-sajjan
ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್

By

Published : Oct 8, 2021, 7:47 AM IST

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಶಿವರಾಜ್ ಸಜ್ಜನ್ ಇಂದು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಹಾವೇರಿ ತಾಲೂಕಿನ ಗೌರಾಪುರದಲ್ಲಿ ಮಾತನಾಡಿದ ಅವರು, 'ನಾನು ಟಿಕೆಟ್​​ಗೆ ಯಾವುದೇ ಲಾಬಿ ನಡೆಸಿಲ್ಲ. ಅಭ್ಯರ್ಥಿಯಾಗಿ ಆಯ್ಕೆಯಾಗುತ್ತೇನೆ ಅಂದುಕೊಂಡಿರಲಿಲ್ಲ' ಎಂದರು.

ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಇಂದು ನಾಮಪತ್ರ ಸಲ್ಲಿಕೆ

'ನನ್ನನ್ನು ಆಯ್ಕೆ ಮಾಡಿದ ಮುಖಂಡರಿಗೆ ಧನ್ಯವಾದಗಳು. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಬಿ.ಸಿ.ಪಾಟೀಲ್ ಮತ್ತು ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ' ಎಂದರು.

'ನಾನು ದಿವಂಗತ ಸಿಎಂ ಉದಾಸಿ ಅವರ ಅಪ್ಪಟ ಶಿಷ್ಯ. ಅವರ ತಮ್ಮನಂತೆ ಕಳೆದ 35 ವರ್ಷಗಳಿಂದ ಅವರ ಜೊತೆಗಿದ್ದೇನೆ. ಉದಾಸಿ ಕುಟುಂಬಸ್ಥರಿಗೆ ಟಿಕೆಟ್ ನೀಡಿ, ಒಂದು ವೇಳೆ ಅವರಿಗೆ ನೀಡದಿದ್ದರೆ ನನಗೆ ನೀಡುವಂತೆ ಕೇಳಿದ್ದೆ, ಅದರಂತೆ ಮುಖಂಡರು ನನಗೆ ಟಿಕೆಟ್ ನೀಡಿದ್ದಾರೆ' ಎಂದು ಹೇಳಿದರು.

ಇದನ್ನೂ ಓದಿ:ಸಿಎಂ ಮತ್ತೆ ದಿಲ್ಲಿ ಪ್ರವಾಸ... ಹೈಕಮಾಂಡ್ ಜೊತೆ ಬೊಮ್ಮಾಯಿ ಚರ್ಚೆ!

ABOUT THE AUTHOR

...view details