ಕರ್ನಾಟಕ

karnataka

ETV Bharat / state

ಸೆಲ್ಫ್​ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಸಂಸದ ಶಿವಕುಮಾರ್ ಉದಾಸಿ... ಕಾರಣ? - ಸಂಸತ್ ಸೆಂಟ್ರಲ್ ಹಾಲ್‌ನ ಕಾರ್ಯಕ್ರಮ

ಸಂಸದ ಶಿವಕುಮಾರ್ ಉದಾಸಿ ಕೂಡ ಕೊರೊನಾ ಭೀತಿಯಿಂದ ಕ್ವಾರಂಟೈನ್‌ನಲ್ಲಿರುವಂತಾಗಿದೆ. ಸಂಸದ ದುಷ್ಯಂತಸಿಂಗ್ ಜೊತೆ ಸಂಸತ್ ಸೆಂಟ್ರಲ್ ಹಾಲ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಉದಾಸಿಯವರು ಸಹ ಕ್ವಾರಂಟೈನ್‌ನಲ್ಲಿ ಇದ್ದಾರೆ.

shivakumar udasi
ಸಂಸದ ಶಿವಕುಮಾರ್ ಉದಾಸಿ

By

Published : Apr 4, 2020, 8:41 AM IST

Updated : Apr 4, 2020, 10:37 AM IST

ಹಾವೇರಿ: ಸಂಸದ ಶಿವಕುಮಾರ್ ಉದಾಸಿ ಸಹ ಕೊರೊನಾ ಭೀತಿಯಿಂದ ಕ್ವಾರಂಟೈನ್‌ನಲ್ಲಿದ್ದಾರೆ. ನವದೆಹಲಿಯ ಮಹದೇವ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಉದಾಸಿ ಕ್ವಾರಂಟೈನ್‌ನಲ್ಲಿದ್ದಾರೆ.

ದುಷ್ಯಂತಸಿಂಗ್ ಜೊತೆ ಉದಾಸಿ ಸಂಸತ್ ಸೆಂಟ್ರಲ್ ಹಾಲ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದುಷ್ಯಂತಸಿಂಗ್ ವರದಿ ನೆಗೆಟಿವ್ ಬಂದಿದೆಯಾದರೂ, ಇನ್ನೊಮ್ಮ ಪರೀಕ್ಷಿಸಬೇಕಿದೆ.

ಎರಡನೇ ಬಾರಿ ರಿಪೋರ್ಟ್ ನೆಗೆಟಿವ್ ಬಂದರೆ ಮಾತ್ರ ಉದಾಸಿ ಕ್ವಾರಂಟೈನ್‌ನಿಂದ ಹೊರ ಬರಲಿದ್ದಾರೆ. ಶಿವಕುಮಾರ್ ಉದಾಸಿ ತಮ್ಮ ಇಬ್ಬರು ಪುತ್ರಿಯರನ್ನ ಲಂಡನ್​ನಿಂದ ಕರೆಸಿಕೊಂಡಿದ್ದು, ಅವರು ಬೆಂಗಳೂರಿನಲ್ಲಿದ್ದಾರೆ.

ಶಿವಕುಮಾರ್ ಉದಾಸಿ ತಂದೆ ಸಿ.ಎಂ.ಉದಾಸಿ ಹಾನಗಲ್‌ನಲ್ಲಿದ್ದು ಇಳಿವಯಸ್ಸಿನಲ್ಲಿದ್ದಾರೆ. ಹೀಗಾಗಿ ಶಿವಕುಮಾರ್ ಉದಾಸಿ ನವದೆಹಲಿಯಲ್ಲಿ ಸ್ವಯಂಪ್ರೇರಿತವಾಗಿ ಕ್ವಾರಂಟೈನನಲ್ಲಿದ್ದಾರೆ ಎನ್ನಲಾಗಿದೆ.

Last Updated : Apr 4, 2020, 10:37 AM IST

ABOUT THE AUTHOR

...view details