ಹಾನಗಲ್: ಪ್ರಸ್ತುತ ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಎಪಿಎಂಸಿ ಕಾಯ್ದೆಯ ವಿರುದ್ಧ ಈಗಾಗಲೆ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಇಂದು ಹಾನಗಲ್ ಪಟ್ಟಣದ ತಮ್ಮ ನಿವಾಸದಲ್ಲಿ ಸಂಸದ ಶಿವಕುಮಾರ ಉದಾಸಿ ಮತ್ತು ಶಾಸಕ ಸಿ.ಎಂ ಉದಾಸಿ ಕಾಯ್ದೆಯ ಬಗೆಗೆ ರೈತ ಮುಖಂಡರ ಜೊತೆ ಸಂವಾದ ನಡೆಸಿದರು.
ಎಪಿಎಂಸಿ ಕಾಯ್ದೆ: ರೈತ ಮುಖಂಡರ ಜೊತೆ ಶಿವಕುಮಾರ ಉದಾಸಿ ಚರ್ಚೆ
ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನೂಕಲವಿದೆ. ಯಾರೂ ವಿರೋಧ ಪಕ್ಷಗಳು ಬಿತ್ತರಿಸುವ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ಶಿವಕುಮಾರ ಉದಾಸಿ ತಿಳಿಸಿದರು.
ಕಾಯ್ಧೆಯ ಬಗೆಗೆ ರೈತರು ಸರಿಯಾಗಿ ತಿಳಿದುಕೊಳ್ಳಬೇಕು ಮತ್ತು ಕಾಯ್ದೆಯಲ್ಲಿ ರೈತರಿಗೆ ತೊಂದರೆಯಾಗುವ ಅಂಶಗಳಿದ್ದರೆ ಸಂಸತ್ನಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಈ ಕೊರೊನಾ ಗದ್ದಲದಲ್ಲಿ ಈ ಕಾಯ್ದೆಯನ್ನ ಜಾರಿಗೆ ತರುತ್ತಿರುವುದು ಎಷ್ಟು ಸಮಂಜಸ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಂಸದ ಈ ಕಾಯ್ದೆಯಿಂದ ರೈತರಿಗೆ ಅನೂಕಲವಿದೆ. ಯಾರೂ, ವಿರೋಧ ಪಕ್ಷಗಳು ಬಿತ್ತರಿಸುವ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ತಿಳಿಸಿದರು. ಈ ಕಾಯ್ದೆಯಲ್ಲಿ ರೈತರಿಗೆ ತೊಂದರೆಯಾಗುವ ಅಂಶಗಳು ಇದ್ದರೆ ಮತ್ತೊಮ್ಮೆ ಚರ್ಚಿಸುತ್ತೇನೆ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನ ಜಾರಿಗೆ ತರುವುದಿಲ್ಲ ನಮ್ಮ ಸರ್ಕಾರ ರೈತರ ಪರ ಇದೇ ಎಂದು ರೈತರಿಗೆ ತಿಳಿಸಿದರು.