ಹಾವೇರಿ:ಜೆಡಿಎಸ್ ನಿಂದ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ರಂಭಾಪುರಿ, ಉಜ್ಜೈನಿ ಪೀಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಮನವಿ ಮಾಡಿದ್ದರಿಂದ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದಾರೆ: ಬಿ.ವೈ.ರಾಘವೇಂದ್ರ - ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಚಾರ್ಯ ಮಹಾಸ್ವಾಮಿ
ಜೆಡಿಎಸ್‌ನಿಂದ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ರಂಭಾಪುರಿ, ಉಜ್ಜೈನಿ ಪೀಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಮನವಿ ಮಾಡಿದ್ದರಿಂದ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರನಲ್ಲಿ ಮಾತನಾಡಿದ ಅವರು, ಹಿರೇಕೆರೂರು ಕ್ಷೇತ್ರದಲ್ಲಿ ಈಗಾಗಲೇ ಬಿ.ಸಿ. ಪಾಟೀಲ್ ನಾಮಪತ್ರ ಸಲ್ಲಿಸಿ, ಸುಮಾರು 60 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಬಣಕ್ಕರ್ರೊಂದಿಗೆ ಸೇರಿ ಜಂಟಿಯಾಗಿ ಸಭೆ ಮಾಡುತ್ತಿದ್ದಾರೆ. ಈಗ ಮತದಾರರಲ್ಲಿ ಬಿಜೆಪಿಯ ಪರವಾಗಿ ಮತ ಹಾಕುವ ಉತ್ಸಾಹ ಬಂದಿದೆ ಎಂದರು.
ಶ್ರೀಗಳಿಗೆ ಸಮಾಜದಲ್ಲಿನ ಬದಲಾವಣೆ, ಹೆಂಡ, ಪಾನೀಯ ಮುಕ್ತ ಮತ್ತು ತಾಲೂಕಿನ ಜನರ ಆಶೋತ್ತರಗಳಿಗೆ ಪೂರಕವಾದ ಆಡಳಿತ ನಡೆಸಬೇಕೆಂಬುದು ಸ್ವಾಮೀಜಿಗಳ ಆಶಯವಾಗಿತ್ತೇ ಹೊರತು ಯಾವುದೇ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷೆಯಿರಲಿಲ್ಲ. ಆ ಅಜೆಂಡಾ ಈಡೇರಿಸೋ ಭರವಸೆವನ್ನು ನಾವು ನೀಡಿದ್ದೇವೆ. ಸ್ವಾಮಿಜಿಗೆ ನಾವು ಭರವಸೆ ನೀಡಿದ ನಂತರ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದಾರೆ ಎಂದರು.