ಹಾವೇರಿ: ಶಿರಸ್ತೇದಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಕೋರ್ಟ್ ಬಳಿ ಇರುವ ನೌಕರರ ಭವನದಲ್ಲಿ ನಡೆದಿದೆ. 42 ವರ್ಷದ ಮಲ್ಲಿಕಾರ್ಜುನ ಭರಗಿ ಆತ್ಮಹತ್ಯೆ ಮಾಡಿಕೊಂಡವರು. ಮೃತ ಮಲ್ಲಿಕಾರ್ಜುನ ಪಟ್ಟಣದ ಕೋರ್ಟ್‌ನಲ್ಲಿ ಶಿರಸ್ತೇದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ವಾಟ್ಸ್ಆ್ಯಪ್ ಸ್ಟೇಟಸ್ಗೆ ಡೆತ್ ನೋಟ್ ಹಾಕಿ ಶಿರಸ್ತೇದಾರ ಆತ್ಮಹತ್ಯೆ: ಮಲ್ಲಿಕಾರ್ಜುನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನಾಲ್ವರ ವಕೀಲರು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಹೀಗಾಗಿ ನನ್ನ ಸಾವಿನಿಂದ ಅವರಿಗೆ ಜಯವಾಗಲಿ ಎಂದು ಡೆನ್ ನೋಟ್ ಬರೆದಿಟ್ಟು, ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.