ಹಾವೇರಿ:ಗುತ್ತಿಗೆದಾರನ ಬಿಲ್ ಪಾವತಿಸಲು ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರೆನ್ನಲಾದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆಯಿದೆ.
ಲಂಚ ಕೇಳದ ಆರೋಪ: ಪಿಡಿಓ ಎಸಿಬಿ ಬಲೆಗೆ - ಅತ್ತಿಗೇರಿ ಗ್ರಾಮದ ಗುತ್ತಿಗೆದಾರ ಮಹೇಶ ಸಾಲಮನಿ
ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದರೆನ್ನಲಾದ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆಯಿದೆ.
ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಪಂನ ಶಿವಾನಂದ ಹಡಪದ ಎಂಬಾತ ಎಸಿಬಿ ಬಲೆಗೆ ಬಿದ್ದವರು ಎಂದು ತಿಳಿದುಬಂದಿದೆ. ಅತ್ತಿಗೇರಿ ಗ್ರಾಮದ ಗುತ್ತಿಗೆದಾರ ಮಹೇಶ ಸಾಲಮನಿ ಎಂಬುವವರಿಗೆ ಬಿಲ್ ಪಾವತಿಸಲು ಒಂದೂವರೆ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರಂತೆ. ಅಂತೆಯೇ ಇಂದು ಗುತ್ತಿಗೆದಾರ ಮಹೇಶ್ ಎಂಬಾತ 50 ಸಾವಿರ ರೂಪಾಯಿ ಹಣ ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗ್ರಾಪಂನ ವಿವಿಧ ಗುತ್ತಿಗೆ ಕೆಲಸಗಳಲ್ಲಿ ಮಹೇಶನಿಗೆ ಗ್ರಾಮ ಪಂಚಾಯತ್ 6 ಲಕ್ಷಕ್ಕೂ ಅಧಿಕ ಹಣ ನೀಡುವುದು ಬಾಕಿ ಇತ್ತಂತೆ. ಈ ಹಿನ್ನೆಲೆಯಲ್ಲಿ ಮಹೇಶ್ ಬಿಲ್ ಪಾವತಿಸಲು ಕೇಳಿದಾಗ ಶಿವಾನಂದ ಒಂದೂವರೆ ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಕುರಿತಂತೆ ಹಾವೇರಿ ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಡಿಓನನ್ನು ವಶಕ್ಕೆ ಪಡೆಯಲಾಗಿದೆ.