ಹಾವೇರಿ : ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಮಾವಿನ ಹಣ್ಣು ವ್ಯಾಪಾರ ಮಾಡುವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಈತನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ.
ಕೊರೊನಾ ಸೋಂಕಿತ ಮಾವಿನ ಹಣ್ಣಿನ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ ಈತ 25 ವರ್ಷದ P-853 ಹೆಸರಿನ ರೋಗಿಯಾಗಿದ್ದು, ಇಂದು ಈತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಟ್ರಾವೆಲ್ ಹಿಸ್ಟರಿ:
ಏಪ್ರಿಲ್ 23,2020ರಿಂದ ಈ ತನಕ ಮೂರು ಬಾರಿ ಮುಂಬೈನ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಬಂದಿರೋ ವ್ಯಾಪಾರಿ.
ಏಪ್ರಿಲ್ 23,2020 ರಂದು ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ್ದ
ಏಪ್ರಿಲ್ 26,2020ರಂದು ಎರಡನೇ ಬಾರಿಗೆ ಮುಂಬೈಗೆ ಹೋಗಿ ಬಂದಿದ್ದ
ಏಪ್ರಿಲ್ 29,2020ರಂದು ಮೂರನೆ ಬಾರಿಗೆ ಮುಂಬೈ ಮಾರ್ಕೆಟ್ ಗೆ ತೆರಳಿದ್ದ
ಮೇ 1,2020ರಂದು ಅಂದಲಗಿಗೆ ವಾಪಸ್ ಆದ ನಂತರ ಮೇ 6,2020ರಂದು ಹಣ್ಣಿನ ಖರೀದಿಗಾಗಿ ಹಳ್ಳಿ ಹಳ್ಳಿಗೆ ಈ ಸೋಂಕಿತ ಓಡಾಡಿದ್ದಾನೆ. ಶಿಗ್ಗಾಂವಿ ಮತ್ತು ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗಿ ಬಂದಿದ್ದಾನೆ.
ಅಂದಲಗಿ, ಹನುಮಸಾಗರ, ಶಡಗರವಳ್ಳಿ, ಬೈಲವಾಳ, ಕೊಪ್ಪರಸಿಕೊಪ್ಪ, ಶಿರಗೋಡ, ಗಿರಿಸಿನಕೊಪ್ಪ, ಹಾನಗಲ್, ಯಳ್ಳೂರು, ಯಳವಟ್ಟಿ, ದುಂಡಸಿ, ಬಸಾಪುರ, ಕೋಣನಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಿರುಗಾಡಿದ್ದಾನೆ.
ಈ ಎಲ್ಲ ಊರುಗಳ ರೈತರಿಂದ ಹಣ್ಣುಗಳನ್ನ ಖರೀದಿಸಿ ಮುಂಬೈ ಮಾರ್ಕೆಟ್ಗೆ ತೆರಳಿ ಅನ್ಲೋಡ್ ಮಾಡಿ ಬಂದಿದ್ದಾನೆ. ಇದೀಗ ಈತನ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.