ಹಾವೇರಿ: ವಿವಿಧ ಸಂಘಟನೆಗಳ ವತಿಯಿಂದ ಹಿರೇಕೆರೂರಿನ ಅಬಲೂರಿನಿಂದ ಆರಂಭವಾಗಿರುವ ಶರಣ ಸಂತರ ಸಂದೇಶ ಯಾತ್ರೆ ಇಂದು ನಗರಕ್ಕೆ ಆಗಮಿಸಿತು.
ಹಾವೇರಿಯಲ್ಲಿ ಶರಣ ಸಂತರ ಸಂದೇಶ ಯಾತ್ರೆಗೆ ಸ್ವಾಗತ - Latest News in Haveri
ವಿವಿಧ ಸಂಘಟನೆಗಳ ವತಿಯಿಂದ ಹಿರೇಕೆರೂರಿನ ಅಬಲೂರಿನಿಂದ ಆರಂಭವಾಗಿರುವ ಶರಣ ಸಂತರ ಸಂದೇಶ ಯಾತ್ರೆ ಇಂದು ಹಾವೇರಿಗೆ ಆಗಮಿಸಿತು.

ಶರಣ ಸಂತರ ಸಂದೇಶ ಯಾತ್ರೆಗೆ ಹಾವೇರಿಯಲ್ಲಿ ಅದ್ದೂರಿ ಸ್ವಾಗತ
ಸಿದ್ದಪ್ಪ ಕಂಬಳಿ ವೃತ್ತಕ್ಕೆ ಆಗಮಿಸಿದ ಯಾತ್ರೆಯನ್ನು ವಿವಿಧ ಸಂಘಟನೆಗಳ ಸದಸ್ಯರು ಸ್ವಾಗತಿಸಿದರು. ಸಂದೇಶ ಯಾತ್ರೆ ಪ್ರಸ್ತುತ ದೇಶದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಉತ್ತರ ಹುಡಕಲು ಮತ್ತು ಹಿಂದೆ ಶರಣರು ಬೋಧಿಸಿದ ಸರ್ವಧರ್ಮ ಸಮನ್ವಯತೆ ಕುರಿತು ಮಾರ್ಗದುದ್ದಕ್ಕೂ ಪ್ರಚಾರ ನಡೆಸಲಿದೆ.
ಶರಣ ಸಂತರ ಸಂದೇಶ ಯಾತ್ರೆಗೆ ಹಾವೇರಿಯಲ್ಲಿ ಸ್ವಾಗತ
ಜೊತೆಗೆ ಪ್ರಮುಖ ನಗರಗಳಲ್ಲಿ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಯುವಜನರನ್ನು ತಲುಪುವ ಗುರಿ ಹೊಂದಿದೆ. ಸಮಾಜ ಪರಿವರ್ತನಾ ಸಮುದಾಯದ ಎಸ್. ಆರ್. ಹಿರೇಮಠ ನೇತೃತ್ವದಲ್ಲಿ ಆರಂಭವಾಗಿರುವ ಈ ಯಾತ್ರೆ ಮಾರ್ಚ್ 1 ರಂದು ಕೂಡಲಸಂಗಮದಲ್ಲಿ ಮುಕ್ತಾಯವಾಗಲಿದೆ.