ಕರ್ನಾಟಕ

karnataka

ETV Bharat / state

ಹಾವೇರಿ; ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕನಿಂದ ಅತ್ಯಾಚಾರ ಆರೋಪ, ದೂರು ದಾಖಲು - ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮೇಲೆ ಲೈಂಗಿಕ ಕಿರಕುಳ ಆರೋಪ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹನುಮನಮಟ್ಟಿಯಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕನೋರ್ವನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ಕೃಷಿ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕನ ಮೇಲೆ ಲೈಂಗಿಕ ಕಿರಕುಳ ಆರೋಪ
Sexual Harassment case registered against Agriculture VV Assistant professor

By

Published : Mar 18, 2021, 12:33 PM IST

Updated : Mar 18, 2021, 2:26 PM IST

ಹಾವೇರಿ:ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹನುಮನಮಟ್ಟಿಯಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕನೋರ್ವನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ತನ್ನ ಮೇಲೆ ಸಹ ಪ್ರಾಧ್ಯಾಪಕ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಎಸ್ಸಿ ಅಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಅತ್ಯಾಚಾರವೆಸಗಿದ ಆರೋಪಿಯನ್ನು ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ಎ.ಎಸ್. ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ನೀಡಿರುವ ದೂರಿನ ಪ್ರತಿ

ನೀನು ನನಗೆ ಇಷ್ಟ, ನೀನು ನನಗೆ ಲೈಂಗಿಕವಾಗಿ ಸಹಕರಿಸಿ ನನ್ನ ಆಸೆ ಈಡೇರಿಸಿದರೆ ತನ್ನ ವಿಷಯದಲ್ಲಿ ಉತ್ತೀರ್ಣ ಮಾಡುತ್ತೇನೆ. ಇಲ್ಲದಿದ್ದರೆ ನಿನಗೆ ಕಡಿಮೆ ಅಂಕ ನೀಡಿ ಫೇಲ್ ಮಾಡುತ್ತೇನೆ ಎಂದು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಬಲವಂತವಾಗಿ ವಿದ್ಯಾನಗರದಲ್ಲಿರುವ ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

ಓದಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ಬಗ್ಗೆ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವು

ಅಷ್ಟೇ ಅಲ್ಲದೆ ತಾನು ಮಾಡಿರುವ ಕೆಲಸದ ಬಗ್ಗೆ ಯಾರ ಬಳಿಯಾದರೂ ಬಾಯಿ ಬಿಟ್ಟರೆ ಫೇಲ್ ಮಾಡುತ್ತೇನೆ, ಪ್ರಾಣ ತೆಗೆಯುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕುತ್ತಾ ಬಂದಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Last Updated : Mar 18, 2021, 2:26 PM IST

ABOUT THE AUTHOR

...view details