ಹಾವೇರಿ :ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ಎಂ ಕುಲಕರ್ಣಿ ಇಂದು ನಿಧನರಾಗಿದ್ದಾರೆ. 56 ವರ್ಷದ ಜಿ.ಎಂ. ಕುಲಕರ್ಣಿ ಮಧುಮೇಹ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾವೇರಿಯಲ್ಲಿ ಉದಯ ಟಿವಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ವರದಿಗಾರಾಗಿ ಕುಲಕರ್ಣಿ ಸೇವೆ ಸಲ್ಲಿಸಿದ್ದರು. ಬಹುಮುಖ ವ್ಯಕ್ತಿತ್ವದ ಕುಲಕರ್ಣಿ ಕವನ ಸಂಕಲನ ರಚಿಸಿದ್ದರು. ಸಿಂಚನ ಪ್ರಕಾಶನದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು.