ಹಾವೇರಿ : 56 ಇಂಚಿನ ಎದೆ ಇದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಪರ್ಸೆಂಟೇಜ್ ಪತ್ರಕ್ಕೆ ಏನು ಕ್ರಮಕೈಗೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಗುತ್ತಿಗೆದಾರರು ಪತ್ರ ಬರೆದಿರುವುದು ನಾಚಿಕೆಗೇಡಿನ ಸಂಗತಿ. ಈ ಪತ್ರಕ್ಕೆ ಪ್ರಧಾನಿ ಕಚೇರಿ ಯಾವ ಕ್ರಮಕೈಗೊಂಡಿದೆ?. ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಬಿಜೆಪಿಯವರು ಪರ್ಸೆಂಟೇಜ್ ಜನಕ ಕಾಂಗ್ರೆಸ್ ಎನ್ನುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ಪರ್ಸೆಂಟೇಜ್ ಯಾವ ಸರ್ಕಾರದಲ್ಲಿದ್ದರು ಅದಕ್ಕೆ ತನಿಖಾಯೋಗ ರಚಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅದು ಯಾವ ಪಕ್ಷದವರೇ ಇರಲಿ ಅವರ ಮೇಲೆ ಕ್ರಮ ಕೈಗೊಳ್ಳಲಿ. ಕಾಂಗ್ರೆಸ್ ಇದ್ದರೆ ಬಿಜೆಪಿ ಮುಖಂಡರು ದಾಖಲಾತಿಗಳ ಬಿಡುಗಡೆ ಮಾಡುವಂತೆ ಸಲೀಂ ಅಹ್ಮದ್ ಒತ್ತಾಯಿಸಿದರು. ಅಲ್ಲದೆ, ಕಾಂಗ್ರೆಸ್ ಪಕ್ಷ ತೆರೆದ ಪುಸ್ತಕ ನಾವು ಏನು ಮರೆಮಾಚುವದಿಲ್ಲಾ ಎಂದು ಸಲೀಂ ಅಹ್ಮದ್ ತಿಳಿಸಿದರು.