ಹಾವೇರಿ: ಬಿಜೆಪಿ ಜನಸಂಕಲ್ಪ ಯಾತ್ರೆ ಬದಲು ಹಣ ಸಂಗ್ರಹ ಮಾಡುವ ಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಈಗ ಜನರ ಬಳಿ ಹೋಗಬೇಕು ಎಂಬುವ ಜ್ಞಾನೋದಯವಾಗಿದೆ. ಬಿಜೆಪಿ ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಿ ಜನರ ಬಳಿ ಹೋಗಿ ಕ್ಷಮೆ ಕೋರುಬೇಕು.
ರಾಜ್ಯದ ಜನರು ಬಿಜೆಪಿಯ ಸರ್ಕಾರದಿಂದ ಭ್ರಮನಿರಶನಾಗಿದ್ದು, ಬದಲಾವಣಿ ಬಯಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಈಗ ನಿಮ್ಮ ಸರ್ಕಾರವಿದೆ ಅದನ್ನ ಸಿಬಿಐ ಅಥವಾ ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ ಎಂದು ಅಹ್ಮದ್ ತಿಳಿಸಿದರು.
ಬಿಜೆಪಿ ಸರ್ಕಾರದ 40 ಪರ್ಸೆಂಟ್ ವಿಚಾರ ದೇಶಕ್ಕೆ ಗೊತ್ತಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಗುತ್ತಿಗೆ ಸಂಘದವರು ಪತ್ರ ಬರೆದರೆ ಅದಕ್ಕೆ ಒಂದು ಉತ್ತರವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇನ್ನು ಪಕ್ಷದ ಟಿಕೆಟ್ ಅಕಾಂಕ್ಷಿಗಳ ಹತ್ತಿರ ಎರಡು ಲಕ್ಷ ರೂಪಾಯಿ ಕಟ್ಟಡಕ್ಕಾಗಿ ಕಲೆಕ್ಟ್ ಮಾಡುತ್ತಿದ್ದೇವೆ.
ಈಗಾಗಲೇ ಮಾಡಿರುವ ಸರ್ವೆ ಪ್ರಕಾರ ರಾಜ್ಯದಲ್ಲಿ ಸಾವಿರಕ್ಕಿಂತ ಅಧಿಕ ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ ಎಂದರು. ಜೆಡಿಎಸ್‌ನವರು ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಅಲ್ಪಸಂಖ್ಯಾತರನ್ನ ಅಭ್ಯರ್ಥಿಯಾಗಿ ಹಾಕಿದ್ದರು. ಇನ್ನು ಕೆಲವು ದಿನ ನೋಡಿ ಬಿಜೆಪಿಯ ಜೆಡಿಎಸ್‌ನ ಯಾವೆಲ್ಲ ನಾಯಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಹೇಳಿದರು.