ಕರ್ನಾಟಕ

karnataka

ETV Bharat / state

ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಸದಾನಂದಗೌಡರದ್ದು ವೈಯಕ್ತಿಕ ವಿಚಾರ: ಮಾಜಿ ಸಚಿವ ಎ ರಾಮದಾಸ್

ಗ್ರಾಮೀಣ ಬದುಕಿನ ಸೊಗಡನ್ನು ಪುನಶ್ಚೇತನಗೊಳಿಸುವ ದೃಷ್ಠಿಯಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಆ ಯೋಜನೆಯಡಿ ರಾಜ್ಯದ 18 ಕಂದಾಯ ಜಿಲ್ಲೆಗಳು, 21 ಲೋಕಸಭಾ ಕ್ಷೇತ್ರಗಳು 143 ವಿಧಾನಸಭಾ ಕ್ಷೇತ್ರಗಳು ಮೊದಲ ಹಂತದಲ್ಲಿ ಅನ್ವಯವಾಗಲಿವೆ ಎಂದು ಮಾಜಿ ಸಚಿವ ಎ ರಾಮದಾಸ್ ಮಾಹಿತಿ ನೀಡಿದರು.

Former minister A Ramdas spoke at the press conference.
ಮಾಜಿ ಸಚಿವ ಎ ರಾಮದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Nov 10, 2023, 9:05 PM IST

Updated : Nov 10, 2023, 10:41 PM IST

ಮಾಜಿ ಸಚಿವ ಎ ರಾಮದಾಸ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ:ಮಾಜಿ ಸಿಎಂ ಡಿ ವಿ ಸದಾನಂದಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವದು ಅವರ ವೈಯಕ್ತಿಕ ವಿಚಾರ ಎಂದು ಮಾಜಿ ಸಚಿವ ಎ ರಾಮದಾಸ್​ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ರಾಜಕೀಯಕ್ಕೆ ಬರುವುದು, ಅದರಿಂದ ನಿವೃತ್ತಿಯಾಗುವುದು ವೈಯಕ್ತಿಕ ವಿಷಯವಾಗಿದೆ. ಮಾಜಿ ಸಿಎಂ ಡಿ ವಿ ಸದಾನಂದಗೌಡ ಅವರು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಬಂದಿದ್ದರು. ಅವರು 1994ರಲ್ಲಿ ವಿಧಾನಸಭೆಗೆ ಬಂದಿದ್ದ ಅವರು, ಅದಾದ ನಂತರ ರಾಜ್ಯಸಭೆಗೆ ಹೋದರು. ರಾಜ್ಯಸಭೆ ಸದಸ್ಯರಾದರು, ರಾಜ್ಯದ ಸಿಎಂ ಆದರು ಕೇಂದ್ರ ಸರ್ಕಾರದಲ್ಲಿ ದೊಡ್ಡ ದೊಡ್ಡ ಖಾತೆಗಳನ್ನು ನಿರ್ವಹಣೆ ಮಾಡಿದರು ಎಂದು ತಿಳಿಸಿದರು.

ಸದಾನಂದಗೌಡ ರಾಜಕೀಯ ನಿವೃತ್ತಿ ಆದ ಬೆನ್ನಲ್ಲಿ ಮಾಜಿ ಸಿಎಂ ಬಿಎಸ್ ವೈ ಹೇಳಿಕೆ ಸ್ಪಷ್ಟನೆ ಬಗ್ಗೆ ಉತ್ತರ ನೀಡುವಷ್ಟು ದೊಡ್ಡವನಲ್ಲ ಎಂದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಪರೀಕ್ಷೆ ಕಾಲಗಳು ಬರುತ್ತವೆ. ಆ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಮುಂದಿನ ಪೀಳಿಗಿಗೆ ನೀಡುವ ಸಂದೇಶ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

2024 ರ ಜನವರಿಯಲ್ಲಿ ಮುಖ್ಯ ಅತಿಥಿಯಾಗಿ ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ವನಿಧಿ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರನ್ನು ಅಂದು ಅತಿಥಿಯಾಗಿ ಆಯ್ಕೆ ಮಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಮತ್ತು ಸ್ವನಿಧಿ ಯೋಜನೆಯ ಓರ್ವ ಫಲಾನುಭವಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ಸ್ವನಿಧಿಯಿಂದ ಪ್ರಧಾನಮಂತ್ರಿ ಸಮೃದ್ದಿವರೆಗೆ ಎಂಟು ಯೋಜನೆಗಳನ್ನು ಸೇರಿಸಲಾಗಿದೆ. ಎಂಟು ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯಕ್ರಮ ನಡೆಯುತ್ತಾ ಇದೆ. ಈ ಹಿನ್ನೆಲೆ ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವದಾಗಿ ಮಾಜಿ ಸಚಿವ ರಾಮದಾಸ್ ತಿಳಿಸಿದರು. ಗ್ರಾಮೀಣ ಬದುಕಿನ ಸೊಗಡನ್ನು ಪುನಶ್ಚೇತನಗೊಳಿಸುವ ದೃಷ್ಠಿಯಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಆ ಯೋಜನೆಯಲ್ಲಿ ರಾಜ್ಯದ 18 ಕಂದಾಯ ಜಿಲ್ಲೆಗಳು ಮತ್ತು 21 ಲೋಕಸಭಾ ಕ್ಷೇತ್ರಗಳು 143 ವಿಧಾನಸಭಾ ಕ್ಷೇತ್ರಗಳು ಮೊದಲ ಹಂತದಲ್ಲಿ ಅನ್ವಯವಾಗಲಿವೆ. ಈಗಾಗಲೇ 18 ಜಿಲ್ಲೆಗಳಲ್ಲಿ 17 ಜಿಲ್ಲೆಗಳ ಪ್ರವಾಸ ಮಾಡಿದ್ದು, 18 ನೇ ಜಿಲ್ಲೆ ಹಾವೇರಿಯಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೊನಾ ಸಮಯದಲ್ಲಿ ಜಾರಿಗೆ ತಂದ ಯೋಜನೆ ಸ್ವನಿಧಿ ಯೋಜನೆ. ಆ ಕಾಲದಲ್ಲಿ ಫುಟ್​​​​ಪಾತ್​​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರ್ತಕರಿಗೆ ಈ ಯೋಜನೆ ಜಾರಿಗೆ ತರಲಾಗಿತ್ತು. ಅಂದು ಅವರ ಆರ್ಥಿಕ ನೀತಿ ಸುಧಾರಣೆಗೆ ಈ ಯೋಜನೆ ಆರಂಭ ಮಾಡಲಾಗಿತ್ತು. ಆದರೆ, ಈಗ ರಾಜ್ಯದ ಪತ್ರಿಕಾ ವಿತರಕರಿಗೆ, ಹಾಲು ವಿತರಕರಿಗೆ, ಕ್ಯಾಟರಿಂಗ್ ಕೆಲಸ ಮಾಡುವವರನ್ನು ಮತ್ತು ಕ್ಯಾಮೆರಾಮನ್‌ಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಈ ಯೋಜನೆಯಲ್ಲಿ ತರುವ ಕೆಲಸ ಮಾಡಿದ್ದೇವೆ ಎಂದು ಮಾಜಿ ಸಚಿವ ರಾಮದಾಸ್ ತಿಳಿಸಿದರು.

ಇದನ್ನೂಓದಿ:ಆಧಾರ್ ಕಾರ್ಡ್ ಅಕ್ರಮ ಪ್ರಕರಣ ಸಿಬಿಐಗೆ ವಹಿಸಿ: ಆಧಾರ್ ಮುಖ್ಯಸ್ಥರಿಗೆ ಬಿಜೆಪಿ ದೂರು

Last Updated : Nov 10, 2023, 10:41 PM IST

ABOUT THE AUTHOR

...view details