ರಾಣೆಬೇನ್ನೂರ: ಬಿಟ್ ಕಾಯಿನ್ (Bitcoin) ಅಂದ್ರೆ ನನಗೂ, ನನ್ನ ಮಗನಿಗೂ ಗೊತ್ತಿಲ್ಲ. ಆದರೆ ಅವನ ಹೆಸರು ಯಾಕೆ ಥಳಕು ಹಾಕಿಕೊಂಡಿದೆ ಎಂಬುದರ ಕುರಿತು ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ (Rudrappa Lamani) ಹೇಳಿದರು.
ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಕೆಲವರು ಬಿಟ್ ಕಾಯಿನ್ ದಂಧೆಯಲ್ಲಿ (Bitcoin scam) ಭಾಗಿಯಾಗಿದ್ದಾರೆ ಎಂಬುದು ಕಂಡುಬಂದಿದೆ. ಆದರೆ ಭಾಗಿಯಾದವರ ಜತೆ ನನ್ನ ಮಗ ಸ್ನೇಹಿತ ಅಂದ ಮಾತ್ರಕ್ಕೆ ಅವನು ಆರೋಪಿಯಲ್ಲ. ಸರ್ಕಾರ ಸಂಪೂರ್ಣ ತನಿಖೆ ಮಾಡಲಿ. ಅದರ ಸತ್ಯಾಸತ್ಯತೆ ತಿಳಿದು ಬರಲಿದೆ. ಈವರೆಗೂ ಪೊಲೀಸರು ಆಗಲಿ ಅಥವಾ ತನಿಖಾಧಿಕಾರಿಗಳಾಗಲಿ ನಮ್ಮನ್ನು ಸಂಪರ್ಕಿಸಿಲ್ಲ. ನಾವು ಕಾನೂನನ್ನು ಗೌರವಿಸುತ್ತವೆ. ಆದರೆ ದುರುದ್ದೇಶದಿಂದ ನನ್ನ ಮಗನನ್ನು ಇಂತಹ ಪ್ರಕರಣಗಳಲ್ಲಿ ತಳಕು ಹಾಕಿಸುವ ಕೆಲಸ ನಡೆಯುತ್ತಿದೆ ಎಂದರು.
ಇತ್ತೀಚೆಗೆ ನನ್ನ ಮಗನ ಜತೆ ಹಲವಾರು ಜನರ ಬಂದು ಫೋಟೋ ತೆಗಿಸಿಕೊಳ್ಳುತ್ತಾರೆ. ಅದು ನಮಗೆ ಗೊತ್ತಿರುವುದಿಲ್ಲ. ನಂತರ ಅವರು ರುದ್ರಪ್ಪ ಲಮಾಣಿಯವರ ಆಪ್ತರು ಎನ್ನುತ್ತಾರೆ. ಈಗ ನನ್ನ ಮಗ ರಾಣೆಬೇನ್ನೂರ ನಗರದಲ್ಲಿ ಕ್ರಷರ್, ಮೈನ್ಸ್, ತೋಟ ನೋಡಿಕೊಂಡು ಹೋಗ್ತಿದ್ದಾನೆ. ಅವನು ಯಾವುದೇ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.